ಬೆಳ್ಳುಳ್ಳಿ ಸೇವನೆಯಿಂದಾಗುವ ಆರೋಗ್ಯದ ಲಾಭಗಳೇನು ? | ಇಲ್ಲಿದೆ ಮಾಹಿತಿ - Mahanayaka
10:25 AM Tuesday 27 - February 2024

ಬೆಳ್ಳುಳ್ಳಿ ಸೇವನೆಯಿಂದಾಗುವ ಆರೋಗ್ಯದ ಲಾಭಗಳೇನು ? | ಇಲ್ಲಿದೆ ಮಾಹಿತಿ

garlic
07/01/2024

ಭಾರತದಲ್ಲಿ ಬೆಳ್ಳುಳ್ಳಿಯನ್ನು ಜನರು ತಮ್ಮ ದಿನನಿತ್ಯದ ಜೀವನದಲ್ಲಿ ಸಾಕಷ್ಟು ಪ್ರಮಾಣಗಳಲ್ಲಿ ಬಳಸುತ್ತಾರೆ. ಮಾಂಸಾಹಾರಿ ಖಾದ್ಯಗಳಿಗಂತೂ ಬೆಳ್ಳುಳ್ಳಿ ಬೇಕೇ ಬೇಕು. ಬೆಳ್ಳುಳ್ಳಿ ಸೇವನೆಯಿಂದ  ನಮ್ಮ ಆರೋಗ್ಯಕ್ಕೆ ಏನೆಲ್ಲ ಪ್ರಯೋಜನಗಳಿವೆ ಬನ್ನಿ ನೋಡೋಣ…

ಪ್ರತಿದಿನ ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಮೂರು ಎಸಳು ಬೆಳ್ಳುಳ್ಳಿಯನ್ನು ಅದಾಗದಿದ್ದರೆ ಅರ್ಧ ಎಸಳು ಮಾಡಿಕೊಂಡು ನುಂಗಿದರೆ,  ನಮ್ಮ ದೇಹದ ರಕ್ತ ಶುದ್ಧಿಯಾಗುತ್ತದೆ. ಮುಖದ ಮೇಲಿರುವ ಮೊಡವೆ, ಅದರ ಕಲೆಗಳು ಮಾಯವಾಗುತ್ತವೆ. ಮಾತ್ರವಲ್ಲ, ಇದರಿಂದ ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳು ಕೂಡ ದೂರವಾಗುತ್ತವೆ.

ಅಸಿಡಿಟಿ, ಅಲರ್ಜಿಯಂತಹ ಸಮಸ್ಯೆಗಳಿಗೆ ಬೆಳ್ಳುಳ್ಳಿ ಒಳ್ಳೆಯದು. ಆದರೆ ತುಂಬಾ ಬೆವರುವವರು ಕಡಿಮೆ ಪ್ರಮಾಣದಲ್ಲಿ ಬೆಳ್ಳುಳ್ಳಿ ಬಳಸಬೇಕು. ಜಾಸ್ತಿ ತಿಂದರೆ, ಬೆವರು ದುರ್ಗ೦ಧಮಯವಾಗುತ್ತದೆ.

ಬೆಳ್ಳುಳ್ಳಿಯಲ್ಲಿ ಪ್ರೋಟೀನ್, ವಿಟಮಿನ್ ಎ,ಬಿ,ಸಿ ಸೇರಿದಂತೆ ಹಲವು ಪೌಷ್ಟಿಕಾಂಶಗಳಿವೆ. ಹಾಲಿನಲ್ಲಿ ಬೆಳ್ಳುಳ್ಳಿ ಹಾಕಿ ಕುದಿಸಿ ಬಾಣಂತಿಯರಿಗೆ ಕೊಟ್ಟರೆ ಎದೆ ಹಾಲು ಹೆಚ್ಚುತ್ತದೆ.

ಬೆಳ್ಳುಳ್ಳಿ ಹಾಕಿ ಕುದಿಸಿದ ಎಣ್ಣೆ ಹಚ್ಚುವುದರಿಂದ ಕಾಲು ನೋವು ಕಡಿಮೆಯಾಗುತ್ತದೆ. ಅಲ್ಲದೇ ಬೆಳ್ಳುಳ್ಳಿಯನ್ನು ಬಳಸುವುದರಿಂದ ಹಲವು ರೋಗಗಳು ಹತ್ತಿರ ಬರುವುದಿಲ್ಲ ಎನ್ನುತ್ತಾರೆ ಬಲ್ಲವರು.

ಇತ್ತೀಚಿನ ಸುದ್ದಿ