ಲಂಡನ್ ನಲ್ಲಿ ಟೈ ಖರೀದಿ ವೇಳೆ ಅಮಿತಾಭ್​​ ಬಚ್ಚನ್ ರನ್ನು ಅಂಗಡಿಯವ ಕೇವಲವಾಗಿ ನೋಡಿದ್ದನಂತೆ! - Mahanayaka

ಲಂಡನ್ ನಲ್ಲಿ ಟೈ ಖರೀದಿ ವೇಳೆ ಅಮಿತಾಭ್​​ ಬಚ್ಚನ್ ರನ್ನು ಅಂಗಡಿಯವ ಕೇವಲವಾಗಿ ನೋಡಿದ್ದನಂತೆ!

amitabh bachchan
13/09/2024

ಲಂಡನ್ ನಲ್ಲಿ ಟೈ ಖರೀದಿಗೆ ಹೋಗಿದ್ದ ವೇಳೆ ಅಮಿತಾಭ್​​ ಬಚ್ಚನ್ ಅವರನ್ನು ಅಂಗಡಿಯವನು ಕೇವಲವಾಗಿ ನೋಡಿದ್ದನಂತೆ, ಈ ವೇಳೆ ಅಮಿತಾಭ್​​ ಬಚ್ಚನ್ ಏನು ಮಾಡಿದ್ರು ಅಂತ ಕಾರ್ಯಕ್ರಮವೊಂದರಲ್ಲಿ ಹಂಚಿಕೊಂಡಿದ್ದಾರೆ.

ಖಾಸಗಿ ವಾಹಿನಿಯಲ್ಲಿ ಕಾರ್ಯಕ್ರಮವೊಂದನ್ನು ಅಮಿತಾಭ್​​ ನಿರೂಪಣೆ ಮಾಡುತ್ತಿದ್ದಾರೆ. ಅದರಲ್ಲಿ ಬಿಗ್​ ಬಿಗೆ ನೀವು ಶಾಪಿಂಗ್​​ ಹೋದಾಗ ಖರೀದಿಸುವ ವಸ್ತುಗಳ ಬೆಲೆಯನ್ನು ನೋಡುತ್ತೀರಾ? ಎನ್ನುವ ಪ್ರಶ್ನೆಗೆ ಉತ್ತರಿಸುತ್ತಾ, ಅವರು ಹಳೆಯ ಘಟನೆಯೊಂದನ್ನು ನೆನಪು ಮಾಡಿಕೊಂಡರು.

ಲಂಡನ್ ನಲ್ಲಿ ಅಮಿತಾಭ್​​ ಬಚ್ಚನ್ ಶಾಪಿಂಗ್ ಗೆ ಹೋಗಿದ್ರಂತೆ. ಈ ವೇಳೆ ಅಲ್ಲಿದ್ದ ಟೈವೊಂದು ಅವರ ಗಮನ ಸೆಳೆದಿತ್ತು. ಅದನ್ನು ತೆಗೆದುಕೊಂಡು  ನೋಡುತ್ತಿದ್ದ ವೇಳೆ ಅಂಗಡಿಯವನು ಅಲ್ಲಿಗೆ ಬಂದು, ಕೇವಲವಾಗಿ ನೋಡಿ, ಇದರ ಬೆಲೆ 120 ಎಂದಿದ್ದಾನಂತೆ. ನೋಡಿ ಪ್ರಯೋಜನವಿಲ್ಲ, ನಿನ್ನಿಂದ ಅದನ್ನು ಖರೀದಿಸಲು ಸಾಧ್ಯವಿಲ್ಲ ಎಂಬಂತೆ ಅವನ ಧ್ವನಿ ಇತ್ತಂತೆ.

ಈ ವೇಳೆ ಅಮಿತಾಭ್​​ ಬಚ್ಚನ್ ಅವರು, ಅಂತಹ 10 ಟೈ ಪ್ಯಾಕ್ ಮಾಡು ಎಂದು ಆರ್ಡರ್ ಮಾಡಿದ್ರಂತೆ ಈ ವೇಳೆ ಅಂಗಡಿಯವನಿಗೆ ಶಾಕ್ ಆಗಿತ್ತಂತೆ. ಭಾರತೀಯರು ಅಂತ ನಮ್ಮನ್ನು ಯಾರು ಕೂಡ ಕಡಿಮೆ ಅಂದಾಜು ಮಾಡಬಾರದು ಎಂದು ಅಮಿತಾಭ್​​ ಬಚ್ಚನ್ ಹೇಳಿದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ