‘ಎದೆ ಹಾಲು ಬೇಕು ಅಂತ ಕೇಳಿದ’ ಅಂತ ವೈರಲ್ ಆಗುತ್ತಿರುವ ಫೋಟೋ ಯಾರದ್ದು?: ಇದರ ಹಿಂದಿನ ಸತ್ಯಾಂಶ ಏನು?
ವಯನಾಡ್ ನ ದುರಂತದಲ್ಲಿ ಅನಾಥರಾದ ಕಂದಮ್ಮಗಳಿಗೆ ಎದೆ ಹಾಲು ಬೇಕಿದ್ದಲ್ಲಿ, ನನ್ನ ಪತ್ನಿ ನೀಡಲು ಸಿದ್ಧ ಎಂದು ಹಾಕಿದ್ದ ಪೋಸ್ಟ್ ಗೆ ವ್ಯಕ್ತಿಯೊಬ್ಬ ‘ನನಗೂ ಹಾಲು ಬೇಕು’ ಅಂತ ಕಾಮೆಂಟ್ ಹಾಕಿದ್ದು, ನಂತರ ಆತನಿಗೆ ಹಿಡಿದು ಥಳಿಸಲಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹಲವು ದಿನಗಳಿಂದಲೂ ವ್ಯಕ್ತಿಯೊಬ್ಬರ ಫೋಟೋ ವೈರಲ್ ಆಗುತ್ತಿದೆ. ಆದರೆ ಇದೀಗ ಇದರ ಸತ್ಯಾಂಶ ತಿಳಿದು ಬಂದಿದೆ.
ಜಾರ್ಜ್ ಎಂಬ ಹೆಸರಿನ ವ್ಯಕ್ತಿ ಮಹಿಳೆಯ ಪೋಸ್ಟ್ ಗೆ ಅಶ್ಲೀಲ ಕಾಮೆಂಟ್ ಹಾಕಿದ್ದ. ಈ ಪೋಸ್ಟ್ ಮಾಡಿದವನಿಗೆ ಥಳಿಸಲಾಗಿದೆ ಎಂಬ ಸಂದೇಶ ವ್ಯಕ್ತಿಯೊಬ್ಬರ ಫೋಟೋದೊಂದಿಗೆ ವೈರಲ್ ಆಗಿತ್ತು. ಆದರೆ ಅಸಲಿ ವಿಚಾರವೇ ಬೇರೆಯೇ ಇದೆ.
ಫೋಟೋದಲ್ಲಿದ್ದ ವ್ಯಕ್ತಿಯನ್ನು ಮಲಯಾಳಂನ ಮನೋರಮಾ ನ್ಯೂಸ್ ಸಂದರ್ಶನ ಮಾಡಿದ್ದು, ಈ ವೇಳೆ ಆ ವ್ಯಕ್ತಿ, ನನಗೆ ಜುಲೈ 26ನೇ ತಾರೀಕಿನಂದು ಕಾರು ಅಪಘಾತದಲ್ಲಿ ಗಂಭೀರವಾಗಿ ಗಾಯವಾಗಿತ್ತು. ಹಾಗಾಗಿ ನಾನು ತಿರುವನಂತಪುರಂನ ಆಸ್ಪತ್ರೆಯಲ್ಲಿ ದಾಖಲಾಗಿದ್ದೆ. ಚಿಕಿತ್ಸೆಗೆ ಸ್ವಲ್ಪ ಸಹಾಯ ಆಗಲಿ ಅಂತ ನನ್ನ ಫೋಟೋ ತೆಗೆದು ಹಣ ನೀಡಲು ಮನವಿ ಮಾಡಿದ್ದೆವು. ಆಗಸ್ಟ್ 2ರಂದು ನಾನು ಫೋಟೋ ಗ್ರೂಪ್ ನಲ್ಲಿ ಹಾಕಿದ್ದೆ. ಆದರೆ ನಂತರ ನೋಡಿದ್ರೆ, ‘ಅಶ್ಲೀಲ ಕಾಮೆಂಟ್ ಹಾಕಿದ್ದ ಜಾರ್ಜ್’ ಗೆ ಥಳಿಸಲಾಗಿದೆ ಅಂತ ಸಾಮಾಜಿಕ ಜಾಲತಾಣಗಳಲ್ಲಿ ನನ್ನ ಫೋಟೋ ವೈರಲ್ ಆಗಿದೆ.
ನಾನು ತಿರುವನಂತಪುರಂ ಆಸ್ಪತ್ರೆಯಲ್ಲಿ ಅಡ್ಮೀಟ್ ಆಗಿದ್ದೆ. ನನಗೆ ಈಗ ಹೊರಗಡೆ ಹೋಗಲು ಸಾಧ್ಯವಾಗದಂತಹ ಪರಿಸ್ಥಿತಿಯಾಗಿದೆ. ನನಗೆ ಪತ್ನಿ ಇದ್ದಾಳೆ, ಒಬ್ಬಳು ಮಗಳಿದ್ದಾಳೆ. ಈಗ ಎಲ್ಲಿಯೂ ನಾನು ಹೋಗದಂತ ಪರಿಸ್ಥಿತಿ ಈಗ ಆಗಿದೆ. ಎಲ್ಲರೂ ನನ್ನನ್ನು ಬೇರೆ ಕಣ್ಣಿನಿಂದ ನನ್ನನ್ನು ನೋಡುತ್ತಿದ್ದಾರೆ.
ನನ್ನ ಗ್ರೂಪ್ ನಲ್ಲಿರುವ ಎಲ್ಲರಿಗೂ ನನ್ನ ಬಗ್ಗೆ ಗೊತ್ತಿದೆ. ನಾನು ಯಾರಿಗೂ ಆ ರೀತಿಯಾಗಿ ಪ್ರತಿಕ್ರಿಯೆ ನೀಡಿಲ್ಲ. ನಾನು ಒಬ್ಬ ರೋಗಿ, ಆಸ್ಪತ್ರೆಯಲ್ಲಿ ಅಡ್ಮೀಟ್ ಆಗಿರುವ ವ್ಯಕ್ತಿ. ಚಿಕಿತ್ಸೆಗೆ ನನಗೆ ಯಾರಾದ್ರೂ ಸಹಾಯ ಮಾಡಿ ಅಂತ ಫೋಟೋ ಹಾಕಿದ್ದೆ. ಈಗ ಆ ಫೋಟೋ ನನ್ನ ಜೀವನವನ್ನೇ ಬಾಧಿಸಿದೆ.
ನನಗೆ ಈ ರೀತಿ ಮಾಡಿದಂತೆ ಬೇರೆಯವರಿಗೆ ಯಾರೂ ಹೀಗೆ ಮಾಡಬೇಡಿ, ಇದನ್ನು ಮಾಡಿದ್ದು ಯಾರು ಅಂತ ನನಗೆ ನೋಡಬೇಕು ಎಂದು ಭಾವುಕರಾಗಿ ಆ ವ್ಯಕ್ತಿ ಹೇಳಿಕೊಂಡಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: