ಶಿಂಧೆ ಬಣದ ಸದಸ್ಯರಿಂದ ಬಿಜೆಪಿಗೆ ಬೆಂಬಲ ಹಿಂಪಡೆತ..? ಎನ್ ಡಿ ಎ ಸರಕಾರದ ಅಸ್ತಿತ್ವಕ್ಕೆ ಸಂಚಕಾರದ ಭೀತಿ - Mahanayaka

ಶಿಂಧೆ ಬಣದ ಸದಸ್ಯರಿಂದ ಬಿಜೆಪಿಗೆ ಬೆಂಬಲ ಹಿಂಪಡೆತ..? ಎನ್ ಡಿ ಎ ಸರಕಾರದ ಅಸ್ತಿತ್ವಕ್ಕೆ ಸಂಚಕಾರದ ಭೀತಿ

05/06/2024


Provided by

ಮಹಾರಾಷ್ಟ್ರದಲ್ಲಿ ಮತ್ತೆ ಅಧಿಕಾರ ಬದಲಾವಣೆಯಾಗುವ ಸೂಚನೆಗಳು ಕಾಣುತ್ತಿವೆ. ಉದ್ದವ್ ಠಾಕ್ರೆ ಪಕ್ಷವನ್ನು ವಿಭಜಿಸಿ ಬಿಜೆಪಿಯೊಂದಿಗೆ ಸೇರಿಕೊಂಡಿದ್ದ ಶಿಂಧೆ ಬಣ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಕ್ಷೀಣ ಬೆಂಬಲ ಕಂಡಿರುವಂತೆಯೇ ಇದೀಗ ಗೆದ್ದ ಆ ಬಣದ ಲೋಕಸಭಾ ಸದಸ್ಯರು ಉದ್ದವ್ ಠಾಕ್ರೆ ಜೊತೆ ಸಂಪರ್ಕದಲ್ಲಿದ್ದಾರೆ ಎಂದು ವರದಿಯಾಗಿದೆ.

ಕೇಂದ್ರದಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ಸಿಗದೇ ಇರುವುದರಿಂದ ಮತ್ತು ಮಿತ್ರ ಪಕ್ಷಗಳನ್ನು ಅವಲಂಬಿಸಿರುವುದರಿಂದ ಈ ಬೆಳವಣಿಗೆ ಬಹಳ ಪ್ರಾಮುಖ್ಯತೆಯನ್ನು ಪಡೆದಿದೆ. ಲೋಕಸಭಾ ಚುನಾವಣೆಯಲ್ಲಿ ಶಿಂದೆ ಬಣವು ಏಳು ಸ್ಥಾನಗಳಲ್ಲಿ ಜಯಗಳಿಸಿದೆ. ಇವರಲ್ಲಿ ನಾಲ್ಕು ಮಂದಿ ಉದ್ದ ವ್ ಠಾಕ್ರೆ ಜೊತೆ ದೂರವಾಣಿ ಸಂಪರ್ಕ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಶಿವಸೇನೆ ಇಬ್ಬಾಗವಾದ ಬಳಿಕ ನಡೆದ ಮೊದಲ ಚುನಾವಣೆಯಲ್ಲಿ ಠಾಕರೆ ಬಣ ಹೆಚ್ಚಿನ ಸ್ಥಾನಗಳನ್ನು ಪಡೆದಿದೆ. ಉದ್ದವ್ ಠಾಕ್ರೆ ಬಣ ಒಂಬತ್ತು ಲೋಕಸಭಾ ಸ್ಥಾನಗಳನ್ನು ಗೆದ್ದಿದೆ. ನಿತೀಶ್ ಕುಮಾರ್ ಮತ್ತು ಚಂದ್ರಬಾಬು ನಾಯ್ಡು ಅವರನ್ನು ಜೊತೆ ಸೇರಿಸಿಕೊಂಡು ಸರಕಾರ ರಚಿಸಲು ಹೊರಟಿರುವ ಬಿಜೆಪಿಗೆ ಈ ಬೆಳವಣಿಗೆ ಬಾರಿ ಆಘಾತವನ್ನು ತಂದಿದೆ ಎಂದು ಹೇಳಲಾಗುತ್ತಿದೆ. ಶಿಂಧೆ ಬಣದ ಸದಸ್ಯರು ಒಂದು ವೇಳೆ ಬಿಜೆಪಿಗೆ ಬೆಂಬಲ ಹಿಂಪಡೆದರೆ ಎನ್ ಡಿ ಎ ಸರಕಾರದ ಅಸ್ತಿತ್ವಕ್ಕೆ ಸಂಚಕಾರ ಬರಲಿದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ