ಸೌದಿಯಲ್ಲಿ ಮರಣದಂಡನೆಗೊಳಗಾಗಿದ್ದ ಕೇರಳದ ವ್ಯಕ್ತಿಯ ಬಿಡುಗಡೆಯ ಪ್ರಕ್ರಿಯೆ ಶುರು - Mahanayaka

ಸೌದಿಯಲ್ಲಿ ಮರಣದಂಡನೆಗೊಳಗಾಗಿದ್ದ ಕೇರಳದ ವ್ಯಕ್ತಿಯ ಬಿಡುಗಡೆಯ ಪ್ರಕ್ರಿಯೆ ಶುರು

05/06/2024

ಸೌದಿ ಅರೇಬಿಯಾದಲ್ಲಿ ಮರಣದಂಡನೆ ಶಿಕ್ಷೆಯನ್ನು ಎದುರಿಸುತ್ತಿರುವ ಕೇರಳದ ಅಬ್ದುಲ್ ರಹೀಮ್ ಅವರ ಬಿಡುಗಡೆಗೆ ಬೇಕಾದ ಪ್ರಕ್ರಿಯೆಗಳು ಅಂತಿಮ ಹಂತದಲ್ಲಿದೆ. ಈ ಕುರಿತಂತೆ ಗವರ್ನರೇಟ್ ಮುಂದೆ ಅಬ್ದುಲ್ ರಹೀಮ್ ಮತ್ತು ಸಂತ್ರಸ್ತ ಕುಟುಂಬದ ಪ್ರತಿನಿಧಿಗಳು ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಒಂದುವರೆ ಕೋಟಿ ಸೌದಿ ರಿಯಾಲ್ ನ ಚೆಕ್ಕನ್ನು ಕೂಡ ಗವರ್ನರೇಟ್ ಅವರಿಗೆ ಹಸ್ತಾಂತರಿಸಲಾಗಿದೆ.

ಈ ಪ್ರಕರಣವು ರಾಜಿಯಲ್ಲಿ ಮುಗಿದಿರುವುದನ್ನು ಗವರ್ನರೇಟ್ ಕೋರ್ಟಿಗೆ ತಿಳಿಸಿದ ಬಳಿಕ ರಹೀಮ್ ಅವರ ಬಿಡುಗಡೆಯಾಗಲಿದೆ. ರಹೀಂ ಪರ ಮತ್ತು ಸಂತ್ರಸ್ತರ ಪರ ನಡೆದ ಒಪ್ಪಂದದ ದಾಖಲೆಯನ್ನು ಮತ್ತು ಪರಿಹಾರ ಮೊತ್ತದ ಚೆಕ್ಕನ್ನು ಗವರ್ನರೇಟ್ ನ್ಯಾಯಾಲಯದ ಮುಂದೆ ಇಡಲಿದ್ದಾರೆ. ಈಗ ನಡೆದಿರುವ ಒಪ್ಪಂದವು ಬಿಡುಗಡೆಗೆ ಸಂಬಂಧಿಸಿದ ಅತಿ ಪ್ರಾಮುಖ್ಯವಾದ ವಿಷಯವಾಗಿದೆ.

ಇದೀಗ ಬಿಡುಗಡೆಗೆ ಬೇಕಾದ ಒಪ್ಪಂದ ದಾಖಲೆ ಪತ್ರಗಳು ಮತ್ತು ಪರಿಹಾರ ಮೊತ್ತದ ಚೆಕ್ಕನ್ನು ಕೂಡ ಸರಿಪಡಿಸಿಕೊಳ್ಳಲಾಗಿರುವುದರಿಂದ ಇನ್ನು ನ್ಯಾಯಾಲಯದ ಆದೇಶವನ್ನಷ್ಟೇ ಕಾಯಲಾಗುತ್ತಿದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ