ಹಜ್ ಯಾತ್ರೆಯಲ್ಲಿದ್ದ ವೇಳೆ ಆರೋಗ್ಯ ಸಮಸ್ಯೆಯಿಂದ ಹತ್ತು ಮಂದಿ ದುರ್ಮರಣ - Mahanayaka

ಹಜ್ ಯಾತ್ರೆಯಲ್ಲಿದ್ದ ವೇಳೆ ಆರೋಗ್ಯ ಸಮಸ್ಯೆಯಿಂದ ಹತ್ತು ಮಂದಿ ದುರ್ಮರಣ

05/06/2024

ಹಜ್ ನಿರ್ವಹಿಸುವುದಕ್ಕಾಗಿ ಸೌದಿ ಅರೇಬಿಯಾ ತಲುಪಿರುವ ಭಾರತೀಯರ ಪೈಕಿ 10 ಮಂದಿ ಆರೋಗ್ಯ ಸಮಸ್ಯೆಯಿಂದಾಗಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಈವರೆಗೆ ಒಂದು 1 ಲಕ್ಷಕ್ಕಿಂತಲೂ ಅಧಿಕ ಮಂದಿ ಹಜ್ ನಿರ್ವಹಿಸುವುದಕ್ಕಾಗಿ ಸೌದಿ ಅರೇಬಿಯಾ ತಲುಪಿದ್ದಾರೆ.

ಈವರೆಗೆ 1,04, 563 ಮಂದಿ ಭಾರತೀಯರು ಹಜ್ ನಿರ್ವಹಣೆಗಾಗಿ ಸೌದಿ ಅರೇಬಿಯಾ ತಲುಪಿದ್ದಾರೆ. ಜಿದ್ದ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಈಗ ಭಾರತೀಯರು ಮಕ್ಕ ಪ್ರವೇಶಿಸುತ್ತಿದ್ದಾರೆ. ಮದೀನಾದ ಮೂಲಕ ಭಾರತೀಯ ಯಾತ್ರಿಕರ ಆಗಮನ ಈಗ ನಿಂತಿದೆ..ಈ ಮೊದಲು ಮದೀನಾಕ್ಕೆ ಬಂದಿದ್ದ ಭಾರತೀಯ ಯಾತ್ರಿಕರು ಎಂಟು ದಿನಗಳ ಮದೀನಾ ಯಾತ್ರೆಯ ಬಳಿಕ ಇದೀಗ ಮಕ್ಕ ಪ್ರವೇಶಿಸುತ್ತಿದ್ದಾರೆ. ಇವರು ಜಿದ್ದಾ ಮೂಲಕ ಮೂಲಕ ಭಾರತಕ್ಕೆ ಬರಲಿದ್ದಾರೆ.

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

  1. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ