ಗೃಹ ಲಕ್ಷ್ಮೀ ಹಣದಿಂದ ಪೆಟ್ರೋಲ್ ಮಾರಾಟ ಮಾಡಿ ಜೀವನ: ಸರ್ಕಾರಕ್ಕೆ ಮಹಿಳೆಯಿಂದ ಧನ್ಯವಾದ

12/04/2025
ಮೈಸೂರು: ಗೃಹಲಕ್ಷ್ಮೀ ಯೋಜನೆಯಿಂದ ಬಂದ ಹಣದಲ್ಲಿ ಪೆಟ್ರೋಲ್, ಇಸ್ಪಿಟ್ ಕಾರ್ಡ್ ಮಾರಾಟ ಮಾಡಿಕೊಂಡು ಜೀವನ ನಡೆಸುತ್ತಿದ್ದೇನೆ ಎಂದು ಯೋಜನೆಯ ಫಲಾನುಭವಿಯೊಬ್ಬರು ಹೇಳಿದ್ದಾರೆ.
ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ಗ್ರಾಮದಲ್ಲಿ ನಡೆದ ಸಭೆಯಲ್ಲಿ ಈ ಘಟನೆ ನಡೆದಿದೆ. ಇಸ್ಪಿಟ್ ಕಾರ್ಡ್ ಮಾರಾಟ ಮಾಡುತ್ತಿದ್ದೇನೆ ಎಂದಾಗ ಸಭೆಯಲ್ಲಿದ್ದ ಗ್ಯಾರೆಂಟಿ ಅನುಷ್ಠಾನ ಪ್ರಾಧಿಕಾರ ತಾಲೂಕು ಸಮಿತಿ ಶಾಸಕ ದರ್ಶನ್ ಧ್ರುವನಾರಾಯಣ್ ಕ್ಷಣ ಕಾಲ ವಿಚಲಿತರಾದರು.
ಗೃಹ ಲಕ್ಷ್ಮೀಯಿಂದ ಸಾಕಷ್ಟು ಸಹಾಯವಾಗಿದೆ. ಈ ಹಣದಿಂದ ಪೆಟ್ಟಿ ಅಂಗಡಿ ಇಟ್ಟುಕೊಂಡು ಮನೆ ವ್ಯವಹಾರ ನೋಡಿಕೊಂಡಿದ್ದೇನೆ. ಇದರಿಂದ ಬಂದ ಲಾಭದಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯವಾಗುತ್ತಿದೆ ಎಂದು ಅವರು ಹೇಳಿದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: