“20ರಂದು ನಿಮ್ಮ ಸಾವು ಖಚಿತ” ಎಂದು ಯಡಿಯೂರಪ್ಪ ವಿರುದ್ಧ ಪೋಸ್ಟ್ | ವ್ಯಕ್ತಿಯ ವಿರುದ್ಧ ಎಫ್ ಐಆರ್ - Mahanayaka

“20ರಂದು ನಿಮ್ಮ ಸಾವು ಖಚಿತ” ಎಂದು ಯಡಿಯೂರಪ್ಪ ವಿರುದ್ಧ ಪೋಸ್ಟ್ | ವ್ಯಕ್ತಿಯ ವಿರುದ್ಧ ಎಫ್ ಐಆರ್

09/02/2021

ಬೀದರ್: ವೋಟು ಕೇಳುವಾಗ ಶಾ, ಮೋದಿ ಅಲ್ಲ, ನೀವು ಬಂದಿದ್ದು. ಪಂಚಮಸಾಲಿ ಲಿಂಗಾಯತರಿಗೆ 2 ಎ ಮೀಸಲಾತಿ ಕೊಡದಿದ್ದರೆ ರಾಜೀನಾಮೆ ಕೊಡಿ. ಇಲ್ಲವಾದರೆ 20 ರಂದು ನಿಮ್ಮ ಸಾವು ಖಚಿತ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಪೋಸ್ಟ್ ಹಾಕಿರುವುದರ ವಿರುದ್ಧ ದೂರು ದಾಖಲಾಗಿದ್ದು, ಪೊಲೀಸರು ಆರೋಪಿ ವಿರುದ್ಧ  ಎಫ್ ಐಆರ್ ದಾಖಲಿಸಿದ್ದಾರೆ.

ಬಿಜೆಪಿ ಮುಖಂಡ ಘಾಳೆಪ್ಪ ಚಟ್ನಳ್ಳಿ ಅವರ ದೂರು ಆಧರಿಸಿ ಪೊಲೀಸರು ಯಾದಗಿರಿ ಜಿಲ್ಲೆಯ ಹರಟಗಿ ಗ್ರಾಮದ ಬಸವರಾಜ ಈರಣ್ಣ ನಾಗರಾಳ ವಿರುದ್ಧ ಎಫ್‍ ಐಆರ್ ದಾಖಲಿಸಿಕೊಂಡಿದ್ದಾರೆ.

 ವೋಟು ಕೇಳುವಾಗ ಶಾ, ಮೋದಿ ಅಲ್ಲ, ನೀವು ಬಂದಿದ್ದು. ಪಂಚಮಸಾಲಿ ಲಿಂಗಾಯತರಿಗೆ 2 ಎ ಮೀಸಲಾತಿ ಕೊಡದಿದ್ದರೆ ರಾಜೀನಾಮೆ ಕೊಡಿ. ಇಲ್ಲವಾದರೆ 20 ರಂದು ನಿಮ್ಮ ಸಾವು ಖಚಿತ ಎಂದು ಬಸವರಾಜ ಫೇಸ್‍ಬುಕ್‍ನಲ್ಲಿ ಕಮೆಂಟ್ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಇತ್ತೀಚಿನ ಸುದ್ದಿ