ಬಿಗ್ ಬ್ರೇಕಿಂಗ್ ನ್ಯೂಸ್: ಯಡಿಯೂರಪ್ಪ ಸಿಎಂ ಕುರ್ಚಿಗೆ ಕಂಟಕ! - Mahanayaka
6:14 PM Tuesday 12 - November 2024

ಬಿಗ್ ಬ್ರೇಕಿಂಗ್ ನ್ಯೂಸ್: ಯಡಿಯೂರಪ್ಪ ಸಿಎಂ ಕುರ್ಚಿಗೆ ಕಂಟಕ!

yediyurappa
26/05/2021

ಬೆಂಗಳೂರು: ರಾಜ್ಯದಲ್ಲಿ ಯಡಿಯೂರಪ್ಪ ಅವರ ಕುರ್ಚಿಯನ್ನು ಅಲುಗಾಡಿಸಲು ಈ ಹಿಂದಿನಿಂದಲೇ ಸ್ವ ಪಕ್ಷದವರಿಂದಲೇ ಪ್ರಯತ್ನ ನಡೆಯುತ್ತಿದೆ ಎನ್ನುವ ಅನುಮಾನಗಳು ಸೃಷ್ಟಿಯಾಗಿತ್ತು. ಆದರೆ ಇದೀಗ ಯಡಿಯೂರಪ್ಪನವರನ್ನು ಕೆಳಗಿಳಿಸಲು ಬಿಜೆಪಿಯಲ್ಲಿ ಎಲ್ಲ ಪ್ರಯತ್ನಗಳು ನಡೆಯುತ್ತಿವೆ ಎನ್ನುವುದು ಸ್ಪಷ್ಟವಾಗಿದೆ.

ಬೆಂಗಳೂರಿನಲ್ಲಿಂದು ಈ ಬಗ್ಗೆ ಮಾತನಾಡಿರುವ ಸಚಿವ ಆರ್.ಅಶೋಕ್, ನಾಯಕತ್ವ ಬದಲಾವಣೆ ವಿಚಾರವಾಗಿ ಸಸಚಿವರು ಹಾಗೂ ಕೆಲವು ಶಾಸಕರು ಪ್ರಯತ್ನಿಸುತ್ತಿದ್ದಾರೆ. ಅನೇಕ ಸಚಿವರು, ಶಾಸಕರು ದೆಹಲಿಯಲ್ಲಿ ಬೀಡುಬಿಟ್ಟಿದ್ದಾರೆ ಎಂದು ಅವರು ಹೇಳಿದ್ದಾರೆ.

ಈ ಹಿಂದಿನಿಂದಲೂ ನಾಯಕತ್ವ ಬದಲಾವಣೆಯ ಬಗ್ಗೆ ಪ್ರಶ್ನಿಸಿದ ವೇಳೆ ಆರ್.ಅಶೋಕ್, ಇದು ಸುಳ್ಳು ಸುದ್ದಿ ಎಂದು ಹೇಳುತ್ತಿದ್ದರು. ಆದರೆ ಈ ಬಾರಿ,  ನಾಯಕತ್ವ ಬದಲಾವಣೆಗೆ ಸಂಬಂಧಿಸಿದಂತೆ ಶೇ.100ರಷ್ಟು ಬದಲಾವಣೆ ಚಟುವಟಿಕೆಗಳು ನಡೆಯುತ್ತಿರುವುದು ನಿಜ ಎಂದು ಅವರು ಹೇಳಿದ್ದಾರೆ.

ಯಡಿಯೂರಪ್ಪನವರನ್ನು ಕುರ್ಚಿಯಿಂದ ಇಳಿಸಲು ಸಕಲ ಪ್ರಯತ್ನಗಳಾಗುತ್ತಿದ್ದು, ದೆಹಲಿಗೆ ಹೋಗಿರುವ ಸಚಿವ, ಶಾಸಕರು ಹೈಕಮಾಂಡ್ ತಲೆಗೆ ಈ ಸಂಬಂಧ ಇರುವೆ ಬಿಡುವ ಕೆಲಸದಲ್ಲಿ ನಿರತರಾಗಿದ್ದಾರೆ ಎಂದು ಹೇಳಲಾಗಿದೆ. ಈ ವಿದ್ಯಮಾನಗಳನ್ನು ಗಮನಿಸಿದರೆ, ಮಾಜಿ ಸಿಎಂ ಸಿದ್ದರಾಮಯ್ಯನವರು ಹೇಳಿರುವ ಮಾತುಗಳು ನಿಜವಾಗುವ ಸಾಧ್ಯತೆಗಳು ಕಂಡು ಬಂದಿದೆ.




ಇತ್ತೀಚಿನ ಸುದ್ದಿ