ಯೋಗೇಶ್ವರ್ ಪಕ್ಷಾಂತರ ಮಾಡಿರುವುದು ಕಮಿಷನ್ ಹೊಡೆಯಲು: ಶೋಭಾ ಕರಂದ್ಲಾಜೆ - Mahanayaka

ಯೋಗೇಶ್ವರ್ ಪಕ್ಷಾಂತರ ಮಾಡಿರುವುದು ಕಮಿಷನ್ ಹೊಡೆಯಲು: ಶೋಭಾ ಕರಂದ್ಲಾಜೆ

shobha karandlaje
09/11/2024

ಚನ್ನಪಟ್ಟಣ: ಯೋಗೇಶ್ವರ್ ಪಕ್ಷಾಂತರ ಮಾಡಿರುವುದು ಕಮಿಷನ್ ಹೊಡೆಯಲು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆರೋಪ ಮಾಡಿದ್ದಾರೆ.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿ.ಪಿ. ಯೋಗೇಶ್ವರ್ ಖಾಲಿ ಕೈಯಲ್ಲಿ ಬಿಜೆಪಿಗೆ ಬಂದರು, ಅವರ ಚುನಾವಣೆಗೆ ಬಿಜೆಪಿ ಹಣ ಖರ್ಚು ಮಾಡಿತು. ಸೋತಾಗ ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಿತು. ಆದರೂ ಅವರು ಪಕ್ಷ ಬಿಟ್ಟರು.

ಅಧಿಕಾರದಲ್ಲಿರುವ ಪಕ್ಷಕ್ಕೆ ಹೋಗುವುದು ಅವರ ಚಾಳಿ ಎಂದು ವಾಗ್ದಾಳಿ ನಡೆಸಿದರು.
ಯೋಗೇಶ್ವರ್ ಅವರು ಭ್ರಷ್ಟಾಚಾರದ ಕೆಲಸ. ಯಾವ ಯಾವ ಸರ್ಕಾರ ಅಧಿಕಾರದಲ್ಲಿರುತ್ತದೊ ಅಲ್ಲಿಗೆ ಸೇರುವುದು ಅವರ ಕೆಟ್ಟ ಬುದ್ದಿ ಎಂದು ಲೇವಡಿ ಮಾಡಿದರು.

ಜೆಡಿಎಸ್ ಹಾಗೂ ಬಿಜೆಪಿ ಕಾರ್ಯಕರ್ತರು ಒಗ್ಗಟಾಗಿ ಮತ ಯಾಚನೆ ಮಾಡಿ ಕಾಂಗ್ರೆಸ್ ಸರ್ಕಾರದ ಮುಖವಾಡವನ್ನು ಬಿಚ್ಚಿಡಬೇಕು. ನಮ್ಮ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರ ಗೆಲುವಿಗೆ ಶ್ರಮಿಸಬೇಕು ಎಂದು ಮನವಿ ಮಾಡಿದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ