ರಸ್ತೆಯಲ್ಲಿ ಬಿದ್ದಿದ್ದ ಹಾಲು ಹಾಗೂ ಮೊಸರು ಪ್ಯಾಕೆಟ್ ಹಿಂದಿರುಗಿಸಿ ಮಾನವೀಯತೆ ಮೆರೆದ ಯುವಕ
ಕೊಟ್ಟಿಗೆಹಾರ: ಬೆಳಗಿನ ವಾಕಿಂಗ್ ಹೋಗೋ ವೇಳೆ ದಾರಿಯಲ್ಲಿ ಬಿದ್ದಿದ್ದ ಹಾಲು ಹಾಗೂ ಮೊಸರು ಪ್ಯಾಕೆಟ್ ಗಳನ್ನು ವಾರಸುದರರಿಗೆ ಹಿಂದಿರುಗಿಸಿ ಮಾನವೀಯತೆ ಮೆರೆದ ಘಟನೆ ಫಲ್ಗುಣಿಗ್ರಾಮದಲ್ಲಿ ನಡೆದಿದೆ.
ಪ್ರತಿನಿತ್ಯ ವಾಕಿಂಗ್ ಹೋಗುವ ಪಲ್ಗುಣಿ ಗ್ರಾಮದ ಮಿಥುನ್ ರವರಿಗೆ ಹಾಲು ಹಾಗೂ ಮೊಸರು ಪ್ಯಾಕೆಟ್ ಗಳು ರಸ್ತೆಯಲ್ಲಿ ಬಿದ್ದಿದ್ದು ಕಂಡು ಗ್ರಾಮದ ಹಾಲು ವ್ಯಾಪಾರಿ ಶಾಮಣ್ಣರವರಿಗೆ ಕರೆ ಮಾಡಿದ್ದಾರೆ ಶಾಮಣ್ಣ ರವರು ಹಾಲಿನ ಪ್ಯಾಕೆಟ್ ಹಾಗೂ ಮೊಸರು ಪ್ಯಾಕೆಟ್ ಗಳನ್ನು ಲೆಕ್ಕ ಮಾಡಿ ನೋಡಿದಾಗ ಕಡಿಮೆ ಇದ್ದದ್ದನ್ನು ನೋಡಿ ನಾನು ಮನೆ ಮನೆಗೆ ಹಾಲು ಹಾಕುವಾಗ ದಾರಿಯಲ್ಲಿ ಬಿದ್ದು ಹೋಗಿದ್ದು ಮಿಥುನವರಿಗೆ ತಿಳಿಸಿದ್ದಾರೆ.
ಮಿಥುನ್ ಅವರು ಹಾಲು ಹಾಗೂ ಮೊಸರು ಪ್ಯಾಕೆಟ್ ಗಳನ್ನು ಹಿಂದಿರುಗಿಸಿ ಮಾನವತೆ ಮೆರೆದಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: