ಸೆಲ್ಫಿ ತೆಗೆಯಲು ಮುಂದಾದ ಯುವಕನನ್ನು ಕೊಂದು ಹಾಕಿದ ಕಾಡಾನೆ!

ಕಾಡಾನೆಯ ಜೊತೆಗೆ ಸೆಲ್ಫಿ ತೆಗೆದುಕೊಳ್ಳಲು ಹೋದ ಯುವಕನನ್ನು ಕಾಡಾನೆ ಕೊಂದು ಹಾಕಿದ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದ್ದು, ಯುವಕನ ಸ್ನೇಹಿತರಿಬ್ಬರು ಸ್ವಲ್ಪದರಲ್ಲೇ ಅಪಾಯದಿಂದ ಪಾರಾಗಿದ್ದಾರೆ.
ಶ್ರೀಕಾಂತ್ ರಾಮಚಂದ್ರ ಮೃತಪಟ್ಟಿರುವ ಯುವಕನಾಗಿದ್ದಾನೆ. ಗಡ್ಚಿರೋಲಿ ಅಬಾಪುರ ಅರಣ್ಯಕ್ಕೆ ಮೂವರು ಸ್ನೇಹಿತರು ಕಾಡಾನೆಯನ್ನು ನೋಡಲು ಹೋಗಿದ್ದರು. ಕಾಡಾನೆಯನ್ನು ನೋಡಿದ ವೇಳೆ ಮೊಬೈಲ್ ತೆಗೆದು ಸೆಲ್ಫಿ ತೆಗೆಯಲು ಶ್ರೀಕಾಂತ್ ಮುಂದಾಗಿದ್ದಾನೆ. ಈ ವೇಳೆ ಮಿಂಚಿನ ವೇಗದಲ್ಲಿ ದಾಳಿ ನಡೆಸಿದ ಕಾಡಾನೆ ಶ್ರೀಕಾಂತ್ ನನ್ನು ಬಲಿಪಡೆದಿದೆ.
ಶ್ರೀಕಾಂತ್ ಸಾತ್ರೆ ಗಡ್ಚಿರೋಲಿ ಜಿಲ್ಲೆಯವನಾಗಿದ್ದು ಕೇಬಲ್ ಅಳವಡಿಕೆಯ ಕೆಲಸ ಮಾಡಿಕೊಂಡಿದ್ದ. ಇದೀಗ ಕಾಡಾನೆಯ ದಾಳಿಗೆ ದಾರುಣವಾಗಿ ಸಾವನ್ನಪ್ಪಿದ್ದಾನೆ.
ಚಿತ್ತಗಾಂಗ್ ಮತ್ತು ಗಡ್ಚಿರೋಲಿ ಅರಣ್ಯ ಪ್ರದೇಶದಲ್ಲಿ ಕಾಡಾನೆಗಳು ಸಂಚರಿಸುತ್ತಿವೆ. ಮುಟ್ನೂರ್ ಅರಣ್ಯ ಪ್ರದೇಶದ ಅಬಾಪುರದಲ್ಲಿ ಕಾಡಾನೆ ಓಡಾಟ ನಡೆಸುತ್ತಿರುವುದಾಗಿ ಸ್ಥಳೀಯರು ಹೇಳಿಕೊಳ್ಳುತ್ತಿದ್ದಾರೆ.
ಕಾಡಾನೆಯ ಜೊತೆಗೆ ಚೆಲ್ಲಾಟವಾಡಲು ಯುವಕರು ಮುಂದಾಗಿರುವುದು ಹುಚ್ಚು ಸಾಹಸವೇ ಸರಿ. ಕಾಡು ಪ್ರಾಣಿಗಳು ಯಾವಾಗ ಹೇಗೆ ವರ್ತಿಸಬಹುದು ಎನ್ನುವುದು ತಿಳಿಯುವುದು ಕಷ್ಟ. ಹಾಗಾಗಿ ಕಾಡು ಪ್ರಾಣಿಗಳನ್ನು ದೂರದಿಂದ ನೋಡಿ ಖುಷಿ ಪಡುವುದು ಉತ್ತಮ, ಆನೆಗಳ ಜೊತೆಗೆ ಅದೃಷ್ಟ ಪರೀಕ್ಷೆ ನಡೆಸುವುದು ಪ್ರಾಣಕ್ಕೆ ಸಂಚಕಾರವನ್ನುಂಟು ಮಾಡಬಹುದು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/JItjEWZ9e5fBWDL6CkTr97