1 ತಿಂಗಳ ಹಸುಗೂಸು ಸಂಶಯಾಸ್ಪದವಾಗಿ ಸಾವು - Mahanayaka
12:58 PM Sunday 15 - February 2026

1 ತಿಂಗಳ ಹಸುಗೂಸು ಸಂಶಯಾಸ್ಪದವಾಗಿ ಸಾವು

baybe
20/01/2023

ಬ್ರಹ್ಮಾವರ: ಮುಕ್ಕೂರು ಗ್ರಾಮದ ಪೆರ್ವಾಜೆ ಹೆಬ್ಬಾರುಬೆಟ್ಟು ಎಂಬಲ್ಲಿ ಫಾರ್ಮ ಹೌಸ್ ನಲ್ಲಿ ಬಿಹಾರ ಮೂಲದ ದಂಪತಿಯ ಹಸುಗೂಸು ಸಂಶಯಾಸ್ಪದವಾಗಿ ಮೃತಪಟ್ಟ ಘಟನೆ ಬಗ್ಗೆ ವರದಿಯಾಗಿದೆ.

ಬಿಹಾರ ಮೂಲದ ರಾಜ ಕುಮಾರ ಮತ್ತು ಆತನ ಹೆಂಡತಿ ರುಣಾ ದೇವಿ ದಂಪತಿಯ ಒಂದು ತಿಂಗಳ ಮಗು ಚಾಂದಿನಿ ಮೃತ ದುರ್ದೈವಿ. ದಂಪತಿ ಇಲ್ಲಿನ ಫಾರ್ಮ್ ಹೌಸ್ ನಲ್ಲಿ ಕೂಲಿ ಕೆಲಸ ಮಾಡಿ, 5 ಜನ ಮಕ್ಕಳೊಂದಿಗೆ ಅಲ್ಲಿಯೇ ಸಮೀಪ ಒಂದು ಸಣ್ಣ ರೂಮ್ ನಲ್ಲಿ ವಾಸವಾಗಿದ್ದರು.

ರುಣಾ ದೇವಿ ಕಳೆದ ಒಂದು ತಿಂಗಳ ಹಿಂದೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಜ.20ರಂದು ಬೆಳಗ್ಗೆ 3 ಗಂಟೆಗೆ ಮಗುವಿಗೆ ಹಾಲು ಕುಡಿಸಿ ಮಲಗಿಸಿದ್ದು, ಮಲಗಿದ್ದ ಮಗುವನ್ನು ಎಬ್ಬಿಸಿದಾಗ ಮಗು ಉಸಿರಾಡದೇ ಮೃತಪಟ್ಟಿರುವುದಾಗಿ ಮಗುವಿನ ತಂದೆ ರಾಜಕುಮಾರ್ ತನ್ನ ಪತ್ನಿಗೆ ತಿಳಿಸಿದ್ದನು.

ಈ ಮಗುವಿನ ಸಾವಿನ ಸಂಶಯ ವ್ಯಕ್ತವಾಗಿದ್ದು ಈ ಕುರಿತು ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LG00SlXNdBFJ1LFb3E40gL

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ