ದೇವಸ್ಥಾನದ ಅರ್ಚಕನಿಂದ 10 ವರ್ಷದ ಮುಸ್ಲಿಮ್ ಬಾಲಕಿಯ ಅತ್ಯಾಚಾರ | ಕಾಮುಕ ಅರ್ಚಕನ ಬಂಧನ
ಬೆಂಗಳೂರು: ಕಥುವಾದಲ್ಲಿ ಪುಟ್ಟ ಮುಸ್ಲಿಮ್ ಮಗುವನ್ನು ದೇವಸ್ಥಾನದಲ್ಲಿಯೇ ಅತ್ಯಾಚಾರ ನಡೆಸಿದ್ದಂತಹದ್ದೇ ಪ್ರಕರಣವೊಂದು ಕರ್ನಾಟಕದ ಬೆಂಗಳೂರಿನ ದೇವನಹಳ್ಳಿಯಲ್ಲಿ ನಡೆದಿದ್ದು, 10 ವರ್ಷದ ಮುಸ್ಲಿಮ್ ಬಾಲಕಿಯ ಮೇಲೆ ದೇವಸ್ಥಾನದ ಅರ್ಚಕನೇ ಅತ್ಯಾಚಾರ ಎಸಗಿದ್ದಾನೆ.
ಬಾಲಕಿ ದೇವನಹಳ್ಳಿ ಸಮೀಪದ ಚೌಡೇಶ್ವರಿ ದೇವಸ್ಥಾನದ ಬಳಿ ಆಟವಾಡುತ್ತಿದ್ದಳು. ಬಳಿಕ ನಾಪತ್ತೆಯಾಗಿದ್ದಳು. ಅಲ್ಲಿಯೇ ಇದ್ದ ಮುನಿಯಮ್ಮ ಎಂಬವರನ್ನು ಕೇಳಿದಾಗ ಸಂತ್ರಸ್ತ ಬಾಲಕಿ ದೇವಸ್ಥಾನದ ಬದಿಯಲ್ಲಿ ಹೋಗಿದ್ದಾಳೆ ಎಂದು ಹೇಳಿದ್ದರು. ಬಾಲಕಿಯ ತಂದೆ ಹೋಗಿ ನೋಡಿದಾಗ ಬಾಲಕಿ ದೇವಸ್ಥಾನದ ಅರ್ಚಕನ ಮನೆಯಿಂದ ಅಳುತ್ತಾ ಹೊರ ಬರುತ್ತಿದ್ದಳು. ಈ ವೇಳೆ ಬಾಲಕಿಯನ್ನು ವಿಚಾರಿಸಿದಾಗ ಅರ್ಚಕ ಬಾಲಕಿಯನ್ನು ಅತ್ಯಾಚಾರ ನಡೆಸಿರುವುದು ಬೆಳಕಿಗೆ ಬಂದಿದೆ.
61 ವರ್ಷದ ದುಷ್ಟ ಅರ್ಚಕ ವೆಂಕಟರಮಣಪ್ಪ ಈ ಅತ್ಯಾಚಾರ ನಡೆಸಿದ್ದು, ಘಟನೆಯ ಬಗ್ಗೆ ತಿಳಿಯುತ್ತಿದ್ದಂತೆಯೇ ಬಾಲಕಿಯ ಪೋಷಕರು ದೇವನಹಳ್ಳಿ ಪೊಲೀಸರಿಗೆ ದೂರು ನೀಡಿದ್ದಾರೆ. ಪೋಷಕರ ದೂರಿನಂತೆಯೇ ಕಾಮುಕ ಅರ್ಚಕನನ್ನು ಪೊಲೀಸರು ಬಂಧಿಸಿದ್ದಾರೆ.
Disclaimer:
www.mahanayaka.in ಅಂತರ್ಜಾಲ ಮಾಧ್ಯಮದಲ್ಲಿ ಪ್ರಕಟವಾದ ಸುದ್ದಿಗಳಲ್ಲಿ ಯಾರದ್ದೇ ಭಾವನೆಗಳಿಗೆ ಧಕ್ಕೆಯಾಗುವಂತಹ ಅಥವಾ ನೋವುಂಟಾಗುವಂತಹ ಅಥವಾ ನಿಮಗೆ ಆಕ್ಷೇಪಾರ್ಹ ಎನಿಸಿದಂತಹ ಅಂಶಗಳ ಬಗ್ಗೆ ಓದುಗರು 9686872149 ನಂಬರ್ ಗೆ ಸುದ್ದಿಯ ಲಿಂಕ್ ಸಹಿತ ನಿಮ್ಮ ದೂರು ಸಲಹೆಗಳನ್ನು ವಾಟ್ಸಾಪ್ ಮಾಡಬಹುದು. ಅಥವಾ ಕರೆ ಮಾಡಬಹುದು. ನಿಮ್ಮ ದೂರನ್ನು ಪರಿಶೀಲಿಸಿ, ಅಂತಹ ಆಕ್ಷೇಪಾರ್ಹ ಅಂಶಗಳನ್ನು ತೆಗೆದು ಹಾಕಲು ಮಾಧ್ಯಮವು ಬದ್ಧವಾಗಿದೆ.