ತಂದೆಯ ಅಂತ್ಯ ಸಂಸ್ಕಾರ ನೆರವೇರಿಸಿದ 11 ವರ್ಷದ ಬಾಲಕಿ
ತುಮಕೂರು: ತನ್ನ ತಂದೆಯ ಅಂತ್ಯ ಸಂಸ್ಕಾರವನ್ನು 11 ವರ್ಷದ ಬಾಲಕಿ ಒಬ್ಬಳು ನೆರವೇರಿಸಿರುವ ಘಟನೆ ತುಮಕೂರು ತಾಲ್ಲೂಕು ಪೆಮ್ಮನಹಳ್ಳಿ ಗ್ರಾಮದಲ್ಲಿ ನಡೆದಿದೆ.
6ನೇ ತರಗತಿ ಓದುತ್ತಿರುವ 11ನೇ ವರ್ಷದ ಮೋನಿಷ ಎಂಬ ಹೆಣ್ಣು ಮಗುವೊಂದು ತನ್ನ ತಂದೆಯ ಅಂತ್ಯಕ್ರಿಯೆಯನ್ನು ನಡೆಸಿ ಮಾದರಿಯಾಗಿದ್ದಾಳೆ.
ಕಳೆದ ಎರಡು ದಿನಗಳ ಹಿಂದೆ ತನ್ನ ತಂದೆಯಾದ ಕೆಂಪರಾಜು (48 ವರ್ಷ) ಕ್ಯಾನ್ಸರ್‌ಖಾಯಿಲೆಯಿಂದ ಸಾವನ್ನಪ್ಪಿದ್ದರು.
ಮೂಲತಃ ಆಟೋ ಚಾಲಕರಾಗಿದ್ದ ತಂದೆ ಕೆಂಪರಾಜು, ಬಡತನದಿಂದಲೇ ಜೀವನ ನಡೆಸುತ್ತಿದ್ದರು, ಆತನಿಗೆ ಇಬ್ಬರೂ ಸಹ ಹೆಣ್ಣು ಮಕ್ಕಳಿದ್ದು ಹಿರಿಯ ಮಗಳಾದ ಮೋನಿಷ ತನ್ನ ತಂದೆಯ ಅಂತ್ಯಕ್ರಿಯೆಯನ್ನು ನಡೆಸಿ ಗ್ರಾಮಸ್ಥರ ಹುಬ್ಬೇರಿಸುವಂತೆ ಮಾಡಿದ್ದಾಳೆ.
ಈಕೆಯ ಕಾರ್ಯಕ್ಕೆ ಗ್ರಾಮಸ್ಥರು ಸಹ ಬೆಂಬಲಿಸಿದ್ದು, ಹಲವಾರು ಜನರಿಗೆ ಮಾದರಿಯಾಗಿದ್ದಾಳೆ. ಇನ್ನು ಈ ಕುಟುಂಬದ ಪೋಷಣೆಯನ್ನು ಮಗುವಿನ ಸಂಬಂಧಿಕರು ನೋಡಿಕೊಳ್ಳಲು ಮುಂದಾಗಿದ್ದಾರೆ.
ಹೆಣ್ಣು ಬರೀ ಆರತಿಗೆ ಮಾತ್ರವೇ ಸೀಮಿತವಾಗಿರದೇ ಕೀರ್ತಿಯನ್ನು ತಂದುಕೊಡಲು ಸಹ ಯಾವುದೇ ಕಾರಣಕ್ಕೂ ಹಿಂದೆ ಬೀಳುವುದಿಲ್ಲ ಎನ್ನುವುದಕ್ಕೆ ಮೋನಿಷ ಸಾಕ್ಷಿಯಾಗಿದ್ದಾಳೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: