ಟ್ಯೂಷನ್ ಟೀಚರ್ ನಿಂದಲೇ ಅಪ್ರಾಪ್ತ ವಿದ್ಯಾರ್ಥಿನಿಯ ಅಪಹರಣ!
ಬೆಂಗಳೂರು/ರಾಮನಗರ: ಟ್ಯೂಷನ್ ಟೀಚರ್ ವೊಬ್ಬ 10ನೇ ತರಗತಿ ವಿದ್ಯಾರ್ಥಿನಿಯನ್ನು ಅಪಹರಣ ಮಾಡಿರುವ ಘಟನೆ ನಡೆದಿದ್ದು, ಘಟನೆ ಸಂಬಂಧ ಬಾಲಕಿಯ ತಂದೆ ಜೆ.ಪಿ.ನಗರ ಠಾಣೆಯಲ್ಲಿ ಕಿಡ್ನಾಪ್ ಪ್ರಕರಣ ದಾಖಲಿಸಿದ್ದಾರೆ.
ಕನಕಪುರ ಮೂಲದ ಟ್ಯೂಷನ್ ಟೀಚರ್ ಅಭಿಷೇಕ್ ವಿದ್ಯಾರ್ಥಿನಿಯನ್ನು ಅಪಹರಣ ಮಾಡಿದ ಆರೋಪಿಯಾಗಿದ್ದಾನೆ. ನವೆಂಬರ್ 23ರಂದು ವಿದ್ಯಾರ್ಥಿನಿ ಎಂದಿನಂತೆ ಟ್ಯೂಷನ್ ಗೆ ಹೋಗಿದ್ದಳು. ಟ್ಯೂಷನ್ ಮುಗಿದು ರಾತ್ರಿಯಾದರೂ ಮನೆಗೆ ವಾಪಸ್ ಆಗಿರಲಿಲ್ಲ. ರಾತ್ರಿ ಟ್ಯೂಷನ್ ಸೆಂಟರ್ ಬಳಿ ಹೋದಾಗ ಬಾಲಕಿಯನ್ನು ಟ್ಯೂಷನ್ ಟೀಚರ್ ಕರೆದೊಯ್ದಿರುವುದು ಬೆಳಕಿಗೆ ಬಂದಿದೆ.
ಬಾಲಕಿಯನ್ನು ಅಪಹರಿಸುವ ವೇಳೆ ಆರೋಪಿಯು ಮನೆಯ ರೂಂ ನಲ್ಲೇ ಮೊಬೈಲ್ ಬಿಟ್ಟು ಪರಾರಿಯಾಗಿದ್ದಾನೆ. ಕಳೆದ 40 ದಿನಗಳಿಂದ ಆರೋಪಿ ತಲೆಮರೆಸಿಕೊಂಡಿದ್ದರೂ ಈವರೆಗೆ ಈತನ ಸುಳಿವು ಲಭ್ಯವಾಗಿಲ್ಲ.
ಆರೋಪಿಯು ಫೋನ್ ಬಳಕೆ ಮಾಡುತ್ತಿಲ್ಲ, ಫೋನ್ ಪೇ, ಗೂಗಲ್ ಪೇಯಂತಹ ಯಾವುದೇ ಆನ್ ಲೈನ್ ಪೇಮೆಂಟ್ ಕೂಡ ಮಾಡಿಲ್ಲ ಹೀಗಾಗಿ ಆರೋಪಿಯ ಸುಳಿವು ಪತ್ತೆ ಸವಾಲಾಗಿದೆ. ಬೆಂಗಳೂರು ಕನಕಪುರ ಸೇರಿದಂತೆ ವಿವಿಧೆಡೆಗಳಲ್ಲಿ ಆರೋಪಿಯ ಪತ್ತೆಯಾಗಿ ಪೊಲೀಸರು ಶೋಧ ನಡೆಸುತ್ತಲೇ ಇದ್ದಾರೆ. ಸದ್ಯ ಪೊಲೀಸರು ಆರೋಪಿ ವಿರುದ್ಧ ಲುಕ್ ಔಟ್ ನೋಟಿಸ್ ಹೊರಡಿಸಿದ್ದಾರೆ
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: