ಒಂದಾದ ಪ್ರಮುಖ 12 ದಲಿತ ಸಂಘರ್ಷ ಸಮಿತಿಗಳು: ಐಕ್ಯತಾ ಹೋರಾಟ ಸಮಿತಿ ರಚನೆ - Mahanayaka

ಒಂದಾದ ಪ್ರಮುಖ 12 ದಲಿತ ಸಂಘರ್ಷ ಸಮಿತಿಗಳು: ಐಕ್ಯತಾ ಹೋರಾಟ ಸಮಿತಿ ರಚನೆ

dalith sangharsha samithi
23/11/2022

ಕರ್ನಾಟಕ ರಾಜ್ಯ ಮಟ್ಟದಲ್ಲಿ ಪ್ರಮುಖ 12 ದಲಿತ ಸಂಘರ್ಷ ಸಮಿತಿಗಳು ಒಂದುಗೂಡಿ ದಲಿತ ಸಂಘರ್ಷ ಸಮಿತಿಗಳ ಐಕ್ಯತಾ ಹೋರಾಟ ಸಮಿತಿ ರಚನೆಗೊಂಡು, ಅವರ ನಿರ್ದೇಶನದ ಮೇರೆಗೆ  ಉಡುಪಿ ಜಿಲ್ಲೆಯಲ್ಲಿಯೂ  ದಲಿತ ಸಂಘಟನೆಗಳ ಐಕ್ಯತಾ ಹೋರಾಟ ಸಮಿತಿಯನ್ನು ರಚಿಸಲಾಯಿತು.

ಹೆಚ್ಚಿನ ಎಲ್ಲಾ ದಲಿತ ಸಂಘಟನೆಗಳ ನಾಯಕರು ಆದಿಉಡುಪಿಯ ಅಂಬೇಡ್ಕರ್ ಭವನದಲ್ಲಿ ಸೇರಿ ಅಡ್ವೊಕೇಟ್ ಮತ್ತು ದ.ಸಂ.ಸ.ಜಿಲ್ಲಾ ಸಂಘಟನಾ  ಸಂಚಾಲಕರಾದ ಮಂಜುನಾಥ್ ಗಿಳಿಯಾರು ಆವರನ್ನು ಸರ್ವಾನುಮತದಿಂದ ಉಡುಪಿ ಜಿಲ್ಲಾ ದಲಿತ ಸಂಘಟನೆಗಳ ಐಕ್ಯತಾ ಒಕ್ಕೂಟದ ಜಿಲ್ಲಾ ಪ್ರಧಾನ ಸಂಚಾಲಕರನ್ನಾಗಿ ಆಯ್ಕೆ ಮಾಡಲಾಯಿತು.

ಸಂಚಾಲಕರಾಗಿ  ಸುಂದರ ಮಾಸ್ತರ್, ಜಯನ್ ಮಲ್ಪೆ, ಶ್ಯಾಮರಾಜ್ ಬಿರ್ತಿ, ಹರೀಶ್ ಮಲ್ಪೆ, ವಾಸುದೇವ ಮುಧೂರು, ರಮೇಶ್ ಕೋಟ್ಯಾನ್, ಪರಮೇಶ್ವರ ಉಪ್ಪೂರು, ಶೇಖರ ಹೆಜಮಾಡಿ, ದಯಾನಂದ ಕಪ್ಪೆಟ್ಟು, ಆನಂದ ಬ್ರಹ್ಮಾವರ ಆಯ್ಕೆಗೊಂಡರು.

ಡಿಸೆಂಬರ್ 6 ಬಾಬಾಸಾಹೇಬರ ಪರಿನಿಬ್ಬಾಣ ದಿನದಂದು ಬೆಂಗಳೂರಿನಲ್ಲಿ ನಡೆಯುವ ” ದಲಿತರ ಸಾಂಸ್ಕೃತಿಕ ಪ್ರತಿರೋಧ ” ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲೆಯಿಂದ ಒಂದು ಸಾವಿರ ಕಾರ್ಯಕರ್ತರು ಭಾಗವಹಿಸಬೇಕೆಂದು ಸರ್ವಾನುಮತದ ನಿರ್ಣಯ  ಕೈಗೊಳ್ಳಲಾಯಿತು.

ಐಕ್ಯತಾ ಒಕ್ಕೂಟ ರಚನೆಯ ನಂತರ ವಿವಿಧ ದಲಿತ ಸಂಟನೆಗಳ ಜಿಲ್ಲಾ ನಾಯಕರಾದ ಸುಂದರ ಮಾಸ್ತರ್, ಜಯನ್ ಮಲ್ಪೆ, ಮಂಜುನಾಥ ಗಿಳಿಯಾರು, ಶೇಖರ ಹೆಜಮಾಡಿ, ಶ್ಯಾಮರಾಜ್ ಬಿರ್ತಿ, ವಾಸುದೇವ ಮುದೂರು, ಹರೀಶ್ ಮಲ್ಪೆ , ಪರಮೇಶ್ವರ ಉಪ್ಪೂರು,ವಿಶ್ವನಾಥ ಬೆಳ್ಳಂಪಳ್ಳಿ,ರಮೇಶ್  ಕೋಟ್ಯಾನ್, ರಾಜು ಬೆಟ್ಟಿನ ಮನೆ, ಭಾಸ್ಕರ್ ಮಾಸ್ಟರ್ ಕುಂಜಿಬೆಟ್ಟು, ಶ್ಯಾಮಸುಂದರ್ ತೆಕ್ಕಟ್ಟೆ, ಮಂಜುನಾಥ್ ಬಾಳ್ಕುದ್ರು, ಶಂಕರ್ ದಾಸ್ ಚೆಂಡ್ಕಳ, ದಯಾನಂದ ಕಪ್ಪೆಟ್ಟು, ಆನಂದ ಬ್ರಹ್ಮಾವರ, ಅಣ್ಣಪ್ಪ ನಕ್ರೆ ಸಹಿತ ವಿವಿಧ ಸಂಘಟನೆಯ ಎಲ್ಲಾ ನಾಯಕರು ಜೊತೆಯಾಗಿ ” ದಲಿತರ ಸಾಂಸ್ಕೃತಿಕ ಪ್ರತಿರೋಧ ” ಇದರ ಕರಪತ್ರ ಬಿಡುಗಡೆ ಮಾಡಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ