ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ವ್ಯಕ್ತಿ ಚಿಕಿತ್ಸೆಗೆ ಸ್ಪಂದಿಸದೆ ಸಾವು: ರಸ್ತೆಯಲ್ಲಿ ಬಿದ್ದಿದ್ರೂ ಜನ ತಿರುಗಿಯೂ ನೋಡಲಿಲ್ಲ
ಉಡುಪಿ: ನಗರದ ಬಸ್ ನಿಲ್ದಾಣ ಪರಿಸರದಲ್ಲಿ ಪ್ರಜ್ಞೆ ಕಳೆದುಕೊಂಡು ಚಿಂತಾಜನಕ ಸ್ಥಿತಿಯಲ್ಲಿದ್ದ ಚಂದ್ರಶೇಖರ್ (60) ಎಂಬವರನ್ನು ಸಮಾಜ ಸೇವಕ ವಿಶು ಶೆಟ್ಟಿ ಅಂಬಲಪಾಡಿ ಅವರು ರಕ್ಷಿಸಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ
ಚಂದ್ರಶೇಖರ್ ಸ್ಥಳೀಯರೆಂದು ಊಹಿಸಲಾಗಿದ್ದು, ಅವರ ರಕ್ತದಲ್ಲಿ ಸಕ್ಕರೆ ಅಂಶ ಸಂಪೂರ್ಣ ಕುಸಿದು ಬಾಯಿಯಲ್ಲಿ ಜೊಲ್ಲು ಸುರಿಯುತ್ತಿತ್ತು. ವ್ಯಕ್ತಿಯು ಚಿಕಿತ್ಸೆಗೆ ಸ್ಪಂದನೆ ನೀಡಿದರೂ ನಂತರ ಪರಿಸ್ಥಿತಿ ಚಿಂತಾಜನಕವಾಗಿ ಸಾವನಪ್ಪಿದ್ದಾರೆ.
ಚಂದ್ರಶೇಖರ್ ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿಯೇ ಬೆಳಗ್ಗೆ 7ರಿಂದ 11 ಗಂಟೆಯವರೆಗೆ ಸಾರ್ವಜನಿಕ ಸ್ಥಳದಲ್ಲಿ ಅನಾಥರಾಗಿ ಬಿದ್ದಿದ್ದರೂ, ಸಾರ್ವಜನಿಕರಾರು ಸ್ಪಂದಿಸದೆ ಇರುವುದಕ್ಕೆ ವಿಶು ಶೆಟ್ಟಿ ಬೇಸರಿಸಿದ್ದಾರೆ. ಹೀಗೆ ಅಸಹಾಯಕರಾಗಿ ಬಿದ್ದಿರುವ ವ್ಯಕ್ತಿಗಳ ಬಗ್ಗೆ ಸಾರ್ವಜನಿಕರು ನಿರ್ಲಕ್ಷಿಸಬಾರದು. ರಸ್ತೆ ಬದಿಯಲ್ಲಿ ಬಿದ್ದವರೆಲ್ಲರೂ ಮದ್ಯವ್ಯಸನಿಗಳಲ್ಲ ಎಂಬುದನ್ನು ಅರಿಯಬೇಕು. ನಿರ್ಲಕ್ಷ್ಯದಿಂದ ಎಷ್ಟೋ ಪ್ರಾಣ ಹಾನಿ ಸಂಭವಿಸಿದೆ. ಕೊನೆ ಪಕ್ಷ 108 ಅಂಬುಲೆನ್ಸ್ ಆದರೂ ಮಾಹಿತಿ ನೀಡಿ ರೋಗಿಯ ಪ್ರಾಣವುಳಿಸುವ ಕಾರ್ಯ ಮಾಡಬೇಕು ಎಂದು ಅವರು ಮನವಿ ಮಾಡಿದ್ದಾರೆ.
ವೃದ್ದರನ್ನು ಆಸ್ಪತ್ರೆಗೆ ತಂದ ಕ್ಷಣವೇ ವೈದ್ಯರು ಹಾಗೂ ಸಿಬ್ಬಂದಿ ಕ್ಷಣ ವಿಳಂಬ ಮಾಡದೆ ಚಿಕಿತ್ಸೆ ನೀಡಿ ರೋಗಿಯ ಪ್ರಾಣವುಳಿಸಲು ಹರಸಾಹಸ ಪಟ್ಟಿದ್ದಾರೆ ಇಂತಹ ಮಾನವೀಯ ಮೌಲ್ಯಗಳುಳ್ಳ ವೈದ್ಯರು, ಸಿಬ್ಬಂದಿಗಳ ಸೇವೆ ಅಭಿನಂದನಾರ್ಹ ಎಂದು ಅವರು ತಿಳಿಸಿದ್ದಾರೆ.
ಮೃತ ಚಂದ್ರಶೇಖರ್ ಅವರ ವಾರೀಸುದಾರರು ಇದ್ದಲ್ಲಿ ತುರ್ತಾಗಿ ಜಿಲ್ಲಾಸ್ಪತ್ರೆಯನ್ನು ಸಂಪರ್ಕಿಸಲು ಸೂಚಿಸಲಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka