ಕಲ್ಲು ಗಣಿಗಾರಿಕೆ ಬ್ಲಾಸ್ಟ್: 15 ಎಲ್.ಇ.ಡಿ. ಟಿವಿಗಳು ಬ್ಲಾಸ್ಟ್, ಮನೆಗಳಿಗೆ ಹಾನಿ, ನಡುಗಿದ ಭೂಮಿ!

ಚಿಕ್ಕಮಗಳೂರು: ಕಲ್ಲು ಗಣಿಗಾರಿಕೆ ಬ್ಲಾಸ್ಟ್ ನ ಪರಿಣಾಮ 15 ಎಲ್.ಇ.ಡಿ. ಟಿವಿಗಳು ಬ್ಲಾಸ್ಟ್ ಆಗಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ನಾಗರಹಳ್ಳಿ, ತಿಮ್ಮನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಅಡುಗೆ ಮನೆಯಲ್ಲಿದ್ದ ಪಾತ್ರೆಗಳು ಮನೆ ತುಂಬಾ ಚೆಲ್ಲಾಪಿಲ್ಲಿಯಾಗಿದ್ದು, ಮನೆಯ ಮೇಲ್ಛಾವಣಿಯ ಶೀಟ್ ಗಳು ಬಿರುಕು ಬಿಟ್ಟಿವೆ.
ಮನೆಯ ಮೇಲ್ಛಾವಣಿಗೆ ಹಾಕಿದ್ದ ಎಲ್.ಇ.ಡಿ.ಲೈಟ್ ಗಳು ಬ್ಲಾಸ್ಟ್ ಆಗಿವೆ. ಕೆಲ ಮನೆಯ ಕಿಟಕಿಯ ಗಾಜುಗಳು ಪುಡಿ—ಪುಡಿಯಾಗಿವೆ.
ಬ್ಲಾಸ್ಟ್ ತೀವ್ರತೆಗೆ ಸುಮಾರು 5–6 ಸೆಕೆಂಡ್ ಭೂಮಿ ಕಂಪಿಸಿದೆ. ನಿನ್ನೆ ಸಂಜೆ ಆರು ಗಂಟೆಗೆ 2 ಡೈನಮೈಟ್ ಗಳು ಬ್ಲಾಸ್ಟ್ ಆಗಿವೆ.
ವರ್ಷದ ಹಿಂದೆ ಕೂಡ ಇದೇ ಗ್ರಾಮದಲ್ಲಿ ಇದೇ ರೀತಿ ಘಟನೆ ಸಂಭವಿಸಿತ್ತು. ಮರ್ಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಗಣಿಗಾರಿಕೆಯಿಂದ ಆತಂಕ ಎದುರಾಗಿದೆ. ಚಿಕ್ಕಮಗಳೂರು ತಾಲೂಕಿನ ಮರ್ಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/HEkqDgrW2BlJLad5kZ1DX7