ತಂದೆ ಬೈದರು ಎಂದು ಆತ್ಮಹತ್ಯೆಗೆ ಶರಣಾದ 22 ವರ್ಷದ ಯುವತಿ - Mahanayaka

ತಂದೆ ಬೈದರು ಎಂದು ಆತ್ಮಹತ್ಯೆಗೆ ಶರಣಾದ 22 ವರ್ಷದ ಯುವತಿ

sowjanya pujari
26/04/2026

ಚಿಕ್ಕಮಗಳೂರು: ತಂದೆ ಬೈದರು ಎಂಬ ಕ್ಷುಲ್ಲಕ ಕಾರಣಕ್ಕೆ ಅವಿವಾಹಿತೆ ಯುವತಿಯೋರ್ವರು ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ದೇವವೃಂದ ಗ್ರಾಮದಲ್ಲಿ ಶನಿವಾರ ಮಧ್ಯಾಹ್ನ ನಡೆದಿದೆ.

ಸೌಜನ್ಯ ಪೂಜಾರಿ (22) ನೇಣಿಗೆ ಶರಣಾದ ಯುವತಿ. ಸೌಜನ್ಯ ಅವರ ತಂದೆ ನಟೇಶ್ ಪೂಜಾರಿ ಅಲಿಯಾಜ್ ಗೋಪಾಲ ಅವರು, ಶನಿವಾರ ಬೆಳಗ್ಗೆ ತರಕಾರಿ ತಂದು ಮಗಳು ಸೌಜನ್ಯ ಅವರಿಗೆ ಸಾಂಬಾರು ಮಾಡುವಂತೆ ತಿಳಿಸಿ ಹೊರ ಹೋಗಿದ್ದರು. ಮಧ್ಯಾಹ್ನ 2 ಗಂಟೆಗೆ ಮನೆಗೆ ವಾಪಾಸು ಬಂದಾಗ ಸಾಂಬಾರು ಮಾಡಿಲ್ಲವೆಂಬ ಕಾರಣಕ್ಕೆ ಮಗಳಿಗೆ ಬೈದು ಪಕ್ಕದ ಮನೆಯಿಂದ ಸಾಂಬಾರ್ ತರಲು ತೆರಳಿದ್ದಾರೆ.

ಈ ಸಮಯದಲ್ಲಿ ಸೌಜನ್ಯ ಮನೆ ಬಾಗಿಲು ಹಾಕಿಕೊಂಡು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಪಟ್ಟಣದ ಎಂಜಿಎಂ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನೆ ಕುರಿತು ಗೋಣಿಬೀಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ