ಪತಿಯೊಂದಿಗೆ ಜಗಳವಾಡಿ 3 ದಿನಗಳ ಮಗುವನ್ನು ಹತ್ಯೆ ಮಾಡಿದ ಮಹಿಳೆ! - Mahanayaka

ಪತಿಯೊಂದಿಗೆ ಜಗಳವಾಡಿ 3 ದಿನಗಳ ಮಗುವನ್ನು ಹತ್ಯೆ ಮಾಡಿದ ಮಹಿಳೆ!

03/12/2020

ತಿರುವನಂತಪುರ:  ಪತಿಯೊಂದಿಗೆ ಜಗಳವಾಡಿದ ಪತ್ನಿ ತನ್ನ ಮೂರು ದಿನಗಳ ಮಗುವನ್ನು ಕೊಂದು ಹಿತ್ತಲಿನಲ್ಲಿ ಹೂಳಿದ ಘಟನೆ ನಡೆದಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಆರೋಪಿ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.


ADS

ತಿರುವನಂತಪುರಂನ ನೆಡುಮಂಗಡದಲ್ಲಿ ಈ ಘಟನೆ ನಡೆದಿದ್ದು,  ಆರೋಪಿ ತಾಯಿ ವಿಜ ಎಂಬಾಕೆಯನ್ನು ಪೊಲೀಸರು ಬಂಧಿಸಿದ್ದಾರೆ.  ಭಾನುವಾರದಂದು ಮಹಿಳೆ ತನ್ನ ನವಜಾತ ಶಿಶುವನ್ನು ಕೊಂದು ಹೂಳಿದ್ದಳು. ಇಂದು ಮಗುವಿನ ಮೃತದೇಹ ಪತ್ತೆಯಾಗಿದ್ದು, ಸ್ಥಳೀಯರು ಇದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಕೊಲೆಯ ಬಳಿಕ ಮಹಿಳೆಯು ತನ್ನ ತವರು ಮನೆಗೆ ತೆರಳಿದ್ದಳು. ಅಲ್ಲಿಂದ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ. ಈ ಕೊಲೆಯಲ್ಲಿ ಬೇರೆಯಾದರಾದರೂ ಭಾಗಿಯಾಗಿದ್ದಾರೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.




 

ಇತ್ತೀಚಿನ ಸುದ್ದಿ