ಸರ್ಕಾರ ಸರ್ವಾಧಿಕಾರಿಯಾದರೆ ಜನರು ಬೀದಿಗಿಳಿಯಲೇ ಬೇಕು | ಭೀಮ್ ಆರ್ಮಿ ಮುಖಂಡ ಚಂದ್ರಶೇಖರ್ ಆಜಾದ್ ಹೇಳಿಕೆ - Mahanayaka

ಸರ್ಕಾರ ಸರ್ವಾಧಿಕಾರಿಯಾದರೆ ಜನರು ಬೀದಿಗಿಳಿಯಲೇ ಬೇಕು | ಭೀಮ್ ಆರ್ಮಿ ಮುಖಂಡ ಚಂದ್ರಶೇಖರ್ ಆಜಾದ್ ಹೇಳಿಕೆ

03/12/2020

ನವದೆಹಲಿ:  ಸರ್ಕಾರ ಸರ್ವಾಧಿಕಾರಿಯಾದರೆ, ಜನರು ಬೀದಿಗೆ ಇಳಿಯಲೇ ಬೇಕು ಎಂದು ಭೀಮ್ ಆರ್ಮಿ ಮುಖಂಡ ಚಂದ್ರಶೇಖರ್ ಆಜಾದ್ ರಾವಣ ಹೇಳಿಕೆ ನೀಡಿದ್ದಾರೆ.

ದೆಹಲಿ-ಹರ್ಯಾಣ ಗಡಿ ಪ್ರದೇಶವಾದ ಸಿಂಗುದಲ್ಲಿ ನಡೆಯುತ್ತಿರುವ ರೈತರ ಚಳುವಳಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸರ್ಕಾರವು ಮೊದಲು ರೈತರನ್ನು ಅವಮಾನಿಸುವುದನ್ನು ನಿಲ್ಲಿಸಬೇಕು. ನಾವು ಎಂದೆಂದಿಗೂ ರೈತರ ಜೊತೆಗೆ ನಿಲ್ಲುತ್ತೇವೆ. ಈ ಆಂದೋಲನ ಮುಗಿಯುವವರೆಗೂ ನಾವು ರೈತರಿಗೆ ಬೆನ್ನೆಲುಬಾಗಿರುತ್ತೇವೆ ಎಂದು ಅವರು ಹೇಳಿದರು.

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನೂತನ ಕೃಷಿ  ಕಾನೂನು ವಿರೋಧಿಸಿ ದೇಶಾದ್ಯಂತ ಪಕ್ಷಾತೀತವಾಗಿ ಹೋರಾಟ ನಡೆಯುತ್ತಿದೆ. ರೈತರ ಹೋರಾಟವು ಇಂದಿಗೆ 8ನೇ ದಿನಕ್ಕೆ ಕಾಲಿಡುತ್ತಿದೆ.  ಈ ನಡುವೆ ಕೇಂದ್ರ ಸರ್ಕಾರ ಹಾಗೂ ರೈತರ ಪ್ರತಿನಿಧಿಗಳ ಜೊತೆಗೆ ಮಾತುಕತೆಗಳೂ ನಡೆಯುತ್ತಿವೆ.

ಕೇಂದ್ರ ಸರ್ಕಾರ ರೈತರ ಪ್ರತಿನಿಧಿಗಳಿಗೆ ವಿವಿಧ ಪ್ರಸ್ತಾಪಗಳನ್ನಿರಿಸಿದರೂ, ರೈತ ಪ್ರತಿನಿಧಿಗಳು ನೂತನ ಕೃಷಿ ಕಾನೂನನ್ನು  ರದ್ದುಪಡಿಸಬೇಕು ಎನ್ನುವ ನಿಲುವಿನಲ್ಲಿ ಗಟ್ಟಿಯಾಗಿ ನಿಂತಿದ್ದಾರೆ. ಈ ಕೃಷಿ ನೀತಿಯನ್ನು ರದ್ದುಪಡಿಸದೇ ರೈತರು ಕೇಂದ್ರ ಸರ್ಕಾರದ ಬೇರಾವುದೇ ಮಾತುಗಳಿಗೆ ತೃಪ್ತರಾಗುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.

 

 


ಇತ್ತೀಚಿನ ಸುದ್ದಿ