ತಿಮಿಂಗಿಲ ವಾಂತಿ ಸಾಗಾಟ: ಇಬ್ಬರು ಆರೋಪಿಗಳ ಸಹಿತ 3 ಕೆ.ಜಿ. ಅಂಬರ್ಗಿಷ್ ವಶ - Mahanayaka

ತಿಮಿಂಗಿಲ ವಾಂತಿ ಸಾಗಾಟ: ಇಬ್ಬರು ಆರೋಪಿಗಳ ಸಹಿತ 3 ಕೆ.ಜಿ. ಅಂಬರ್ಗಿಷ್ ವಶ

ambergish possession
28/05/2023

ಅಕ್ರಮವಾಗಿ ಬಸ್ ನಲ್ಲಿ ಅಂಬರ್ಗಿಷ್ (ತಿಮಿಂಗಲ ವಾಂತಿ) ಸಾಗಿಸುತ್ತಿದ್ದ ಇಬ್ಬರನ್ನು ಸಿಐಡಿ ಅರಣ್ಯ ಘಟಕ ಬಂಧಿಸಿದ ಘಟನೆ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲ್ಲೂಕಿನ ಮೂಡಿಗುಂಡ ಬಸ್ ನಿಲ್ದಾಣದ ಬಳಿ ನಡೆದಿದೆ.

ಬಂಧಿತರಿಂದ 3.5 kg ತಿಮಿಂಗಳ ವಾಂತಿ ವಶಪಡಿಸಿಕೊಳ್ಳಲಾಗಿದೆ. ಕೇರಳದಿಂದ ಬೆಂಗಳೂರಿಗೆ ಸಾಗಿಸುವ ವೇಳೆ ಸಿಐಡಿ  ಅರಣ್ಯ ಪೊಲೀಸ್ ಕಾರ್ಯಾಚರಣೆ ನಡೆಸಿದ್ದು, ಚಿಕ್ಕಮಂಗಳೂರು ಜಿಲ್ಲೆಯ ತರಿಕೆರೆಯ ಸಮಿ ಆಹಮ್ಮದ್ ಹಾಗೂ ಫೈರೋಜ್ ಖಾನ್ ಎಂಬವರನ್ನು ಬಂಧಿಸಿದೆ.

ಇದು ಎರಡನೇ ಬಾರಿಗೆ ಕೊಳ್ಳೇಗಾಲದ ಬಳಿ ತಿಮಿಂಗಿಲ ವಾಂತಿ ಸಾಗಾಟ ಪ್ರಕರಣವಾಗಿದ್ದು,  ಆರೋಪಿಗಳಿಂದ ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ತಿಮಿಂಗಿಲ ವಾಂತಿ ಹಾಗೂ ಸ್ವಲ್ಪ ನಗದನ್ನು ಸಿಐಡಿ ಅರಣ್ಯ ಘಟಕ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಯಾರಿಗೂ ಅನುಮಾನ ಬಾರದಂತೆ ಸರ್ಕಾರಿ ಬಸ್ಸಿನಲ್ಲೇ ಕಾಲೇಜ್ ಬ್ಯಾಗ್‌ ನಲ್ಲಿ ತಿಮಿಂಗಿಲ ವಾಂತಿ ಸಾಗಿಸಲಾಗುತ್ತಿತ್ತು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

Disclaimer:

www.mahanayaka.in ಅಂತರ್ಜಾಲ ಮಾಧ್ಯಮದಲ್ಲಿ ಪ್ರಕಟವಾದ ಸುದ್ದಿಗಳಲ್ಲಿ ಯಾರದ್ದೇ ಭಾವನೆಗಳಿಗೆ ಧಕ್ಕೆಯಾಗುವಂತಹ ಅಥವಾ ನೋವುಂಟಾಗುವಂತಹ ಅಥವಾ ನಿಮಗೆ ಆಕ್ಷೇಪಾರ್ಹ ಎನಿಸಿದಂತಹ ಅಂಶಗಳ ಬಗ್ಗೆ ಓದುಗರು 9686872149 ನಂಬರ್ ಗೆ ಸುದ್ದಿಯ ಲಿಂಕ್ ಸಹಿತ ನಿಮ್ಮ ದೂರು ಸಲಹೆಗಳನ್ನು ವಾಟ್ಸಾಪ್ ಮಾಡಬಹುದು. ಅಥವಾ ಕರೆ ಮಾಡಬಹುದು. ನಿಮ್ಮ ದೂರನ್ನು ಪರಿಶೀಲಿಸಿ, ಅಂತಹ ಆಕ್ಷೇಪಾರ್ಹ ಅಂಶಗಳನ್ನು ತೆಗೆದು ಹಾಕಲು ಮಾಧ್ಯಮವು ಬದ್ಧವಾಗಿದೆ.

ಇತ್ತೀಚಿನ ಸುದ್ದಿ