ಪ್ರತಿಭಟನಾ ನಿರತ ಮಹಿಳಾ ಕುಸ್ತಿಪಟುಗಳನ್ನು ತಳ್ಳಿ, ಎಳೆದೊಯ್ದು ಬಂಧಿಸಿದ ಪೊಲೀಸರು: ವ್ಯಾಪಕ ಆಕ್ರೋಶ - Mahanayaka

ಪ್ರತಿಭಟನಾ ನಿರತ ಮಹಿಳಾ ಕುಸ್ತಿಪಟುಗಳನ್ನು ತಳ್ಳಿ, ಎಳೆದೊಯ್ದು ಬಂಧಿಸಿದ ಪೊಲೀಸರು: ವ್ಯಾಪಕ ಆಕ್ರೋಶ

Wrestlers Protest
28/05/2023

ನವದೆಹಲಿ: ಒಂದೆಡೆ ದೇಶದ ಹೊಸ ಸಂಸತ್ ಭವನದ ಉದ್ಘಾಟನೆ ಕಾರ್ಯಕ್ರಮ ನಡೆಯುತ್ತಿದ್ದರೆ, ಇನ್ನೊಂದೆಡೆ ಆಡಳಿತರೂಢ ಬಿಜೆಪಿಯ ಸದಸ್ಯರಾದ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳದ ಬಗ್ಗೆ ಆರೋಪಿಸಿ ಮಹಿಳಾ ಕುಸ್ತಿಪಟುಗಳು ಪ್ರತಿಭಟನೆ ನಡೆಸಿದ್ದು, ಪೊಲೀಸ್ ಹಾಗೂ ಕುಸ್ತಿಪಟುಗಳ ನಡುವೆ ಸಂಘರ್ಷವೇರ್ಪಟ್ಟಿದೆ.


Provided by

ಉದ್ಘಾಟನಾ ಕಾರ್ಯಕ್ರಮದಿಂದ 2 ಕಿ.ಮೀ.ದೂರದಲ್ಲಿ  ಪ್ರತಿಭಟನೆ ನಡೆಸುತ್ತಿದ್ದ ಪ್ರತಿಭಟನಾಕಾರರು ಸಂಸತ್ ಕಡೆಗೆ ಮೆರವಣಿಗೆ ಹೊರಡಲು ಮುಂದಾಗುತ್ತಿದ್ದಂತೆ ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸಿದ್ದಾರೆ.

ಕಾಮನ್‌ ವೆಲ್ತ್ ಗೇಮ್ಸ್‌ ನಲ್ಲಿ ಪದಕ ಗೆದ್ದ ಚಾಂಪಿಯನ್‌ ಗಳನ್ನು  ಹಿಂಸಾತ್ಮಕವಾಗಿ ಪೊಲೀಸರು ತಳ್ಳಿ, ತಳ್ಳಿ ಎಳೆದೊಯ್ದಿದ್ದು, ಇದರ ವಿರುದ್ಧ ವ್ಯಾಪಕ ಆಕ್ರೋಶ ಕೇಳಿ ಬಂದಿದೆ.

ಪ್ರತಿಭಟನೆಯ ಭಾಗವಾಗಿ ಅಥ್ಲೀಟ್‌ಗಳು ‘ಮಹಿಳಾ ಸಮ್ಮಾನ್ ಮಹಾಪಂಚಾಯತ್’ (ಮಹಿಳಾ ಅಸೆಂಬ್ಲಿ) ಅನ್ನು ಯೋಜಿಸಿದ್ದರು. ಪ್ರತಿಭಟನಾಕಾರರು ಸಂಸತ್ ಕಡೆಗೆ ಬರುವ ಸಾಧ್ಯತೆಗಳ ಹಿನ್ನೆಲೆಯಲ್ಲಿ ಮೊದಲೇ ಜಂತರ್ ಮಂತರ್ ನಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿತ್ತು. ಕುಸ್ತಿಪಟುಗಳು ಬ್ಯಾರಿಕೇಡ್ ಗಳನ್ನು ಭೇದಿಸಿ ಸಂಸತ್ ಕಡೆಗೆ ಮೆರವಣಿಗೆ ನಡೆಸಲು ಮುಂದಾದಾಗ ಪೊಲೀಸರು ಕುಸ್ತಿಪಟುಗಳನ್ನು ಬಂಧಿಸಿದ್ದು, ಪದಕ ಗೆದ್ದ ಚಾಂಪಿಯನ್‌ ಗಳನ್ನು ಪೊಲೀಸರು ಬಲವಂತವಾಗಿ ಎಳೆದೊಯ್ದು ಬಂಧಿಸಿದ್ದಾರೆ ಅನ್ನೋ ಆರೋಪ ಕೇಳಿ ಬಂದಿದೆ.

ಏಪ್ರಿಲ್ 23ರಿಂದ ಪ್ರತಿಭಟನೆ ಆರಂಭಿಸಿದ ಕುಸ್ತಿಪಟುಗಳು ಈವರೆಗೆ ಹಲವು ರೀತಿಯ ಪ್ರತಿಭಟನೆಗಳನ್ನು ನಡೆಸಿದ್ದಾರೆ. ಇದೀಗ ಈ ಪ್ರತಿಭಟನೆ ದೇಶ ವಿದೇಶದ ಗಮನ ಸೆಳೆದಿದೆ. ವಿರೋಧ ಪಕ್ಷದ ನಾಯಕರು ಈ ಘಟನೆ ವಿರುದ್ಧ ತೀವ್ರ ಆಕ್ರೋಶ ಹೊರ ಹಾಕಿದ್ದು,  ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

https://twitter.com/SakshiMalik/status/1662729269532065792?s=20

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ