ಮುಖೇಶ್ ಅಂಬಾನಿ ಅವರ 5 ಜಿಗಾಗಿ ಚಿತ್ರಮಂದಿರ ಇನ್ನೂ ತೆರೆದಿಲ್ಲ, ಇದು ದೊಡ್ಡ ಹಗರಣ | ಡಿಬಾಸ್ ದರ್ಶನ್ ಹೇಳಿಕೆ - Mahanayaka

ಮುಖೇಶ್ ಅಂಬಾನಿ ಅವರ 5 ಜಿಗಾಗಿ ಚಿತ್ರಮಂದಿರ ಇನ್ನೂ ತೆರೆದಿಲ್ಲ, ಇದು ದೊಡ್ಡ ಹಗರಣ | ಡಿಬಾಸ್ ದರ್ಶನ್ ಹೇಳಿಕೆ

10/01/2021

ಬೆಂಗಳೂರು: ಓವರ್ ದಿ ಟಾಪ್‌ (ಓಟಿಟಿ) ವೇದಿಕೆಯಲ್ಲಿ ಸಿನಿಮಾ ಬಿಡುಗಡೆಯ ಬಗ್ಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಸಮಾಧಾನ ವ್ಯಕ್ತಪಡಿಸಿದ್ದು, ಈ ಬಗ್ಗೆ ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ.

ಫೇಸ್ ಬುಕ್ ಲೈವ್ ನಲ್ಲಿದ್ದ ದರ್ಶನ್ ಅವರು, ಅಭಿಮಾನಿಯೋರ್ವರು ಓಟಿಟಿ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನಿರ್ಮಾಪಕರು ಎಲ್ಲಿಂದಲೋ ಹಣ ತರುತ್ತಾರೆ. ಜನರಿಗೆ ಮನರಂಜನೆ ನೀಡಲು ನಾವೆಲ್ಲ ಜೀವಪಣಕ್ಕಿಟ್ಟು ಸಿನಿಮಾ ಮಾಡುತ್ತೇವೆ. ಆದರೆ ಸಿನಿಮಾವನ್ನು ಮೊಬೈಲ್  ನಲ್ಲಿಯೋ, ಟಿವಿಯಲ್ಲಿಯೋ ನೋಡಿದರೆ ಮಜಾ ಇರುವುದಿಲ್ಲ ಎಂದು ಹೇಳಿದರು.

ಶಾಲೆಗಳು, ಕಾಲೇಜ್ ಗಳು ತೆರೆದಿವೆ. ಮದುವೆ ಮಂಟಪದಲ್ಲಿ ಸಾವಿರಾರು ಜನರು ಸೇರುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಸಾವಿರಾರು ಜನರು ಓಡಾಡುತ್ತಿದ್ದಾರೆ. ಆದರೆ ಚಿತ್ರಮಂದಿರಗಳನ್ನು ಮಾತ್ರ ಇನ್ನೂ ತೆರೆದಿಲ್ಲ.  ಇದರ ಹಿಂದೆ ಮುಖೇಶ್ ಅಂಬಾನಿ ಅವರ 5 ಇದ್ದು, ಇದೊಂದು ದೊಡ್ಡ ಹಗರಣ ಎಂದು ನನಗೆ ಅನ್ನಿಸುತ್ತಿದೆ ಎಂದು ದರ್ಶನ್ ಹೇಳಿದರು.


Provided by

5ಜಿ ಆರಂಭಕ್ಕಾಗಿ ಚಿತ್ರಮಂದಿರಗಳನ್ನು ತೆರೆಯಲಾಗುತ್ತಿಲ್ಲ.ಇದೊಂದು ದೊಡ್ಡ ಹಗರಣ ಎಂದು ನನಗೆ ಅನ್ನಿಸುತ್ತಿದೆ ಎಂದು ಡಿಬಾಸ್ ಅನುಮಾನ ವ್ಯಕ್ತಪಡಿಸಿದ್ದಾರೆ. ಹಲವು ಸಮಯಗಳಿಂದಲೂ ಚಿತ್ರರಂಗದಲ್ಲಿ ಇಂತಹದ್ದೊಂದು ಚರ್ಚೆ ಇತ್ತು. ಆದರೆ, ಚಿತ್ರರಂಗಗಳಲ್ಲಿರುವ ಪುಕ್ಕಲು ತನದಿಂದಾಗಿ ಈ ವಿಚಾರದ ಬಗ್ಗೆ ಯಾರೂ ಮಾತನಾಡಿರಲ್ಲ. ಇದೀಗ ದರ್ಶನ್ ಅವರು ಈ ವಿಚಾರದ ಬಗ್ಗೆ ಧೈರ್ಯವಾಗಿ ಮಾತನಾಡಿದ್ದಾರೆ.

ಇದೇ ಸಂದರ್ಭ ತಮ್ಮ ಹೊಸ ಚಿತ್ರ ರಾಬರ್ಟ್ ಬಿಡುಗಡೆಯ ಬಗ್ಗೆ ಮಾತನಾಡಿದ ದರ್ಶನ್, ಚಿತ್ರವು ಖಂಡಿತವಾಗಿಯೂ ಮಾರ್ಚ್ 11ರಂದು ಬಿಡುಗಡೆ ಮಾಡುವ ಸಾಧ್ಯತೆ ಇದೆ ಎಂದು ತಿಳಿಸಿದರು.

ಇತ್ತೀಚಿನ ಸುದ್ದಿ