ಉರುಳುತ್ತಿದ್ದ ಕಟ್ಟಡದಲ್ಲಿದ್ದ 75 ಜನರನ್ನು ಕಾಪಾಡಿದ 18 ವರ್ಷದ ಯುವಕ! - Mahanayaka
4:37 AM Saturday 14 - September 2024

ಉರುಳುತ್ತಿದ್ದ ಕಟ್ಟಡದಲ್ಲಿದ್ದ 75 ಜನರನ್ನು ಕಾಪಾಡಿದ 18 ವರ್ಷದ ಯುವಕ!

31/10/2020

ಮುಂಬೈ: ಉರುಳುತ್ತಿದ್ದ ಎರಡು ಅಂತಸ್ತಿನ ಕಟ್ಟಡದಿಂದ ಸುಮಾರು 75 ನಿವಾಸಿಗಳನ್ನು ಯುವಕನೋರ್ವ ಕಾಪಾಡಿದ್ದು, ಗುರುವಾರ ಬೆಳಗ್ಗೆ ಮುಂಬೈ ಸಮೀಪದ ಡೊಂಬಿವಲಿಯಲ್ಲಿ ಈ ಘಟನೆ ನಡೆದಿದೆ.



ಬೆಳಗ್ಗಿನ ಜಾವ 4 ಗಂಟೆಗೆ  18 ವರ್ಷದ ಕುನಾಲ್ ಮೊಹಿತೆ ಎಂಬ ಯುವಕ ವೆಬ್ ಸೀರಿಸ್ ನೋಡುತ್ತಿದ್ದ ಈ ಸಂದರ್ಭದಲ್ಲಿ ತನ್ನ ಮನೆಯ ಅಡುಗೆ ಕೋಣೆಯೊಂದು ಭಾಗ ಇದ್ದಕ್ಕಿದ್ದಂತೆ ಕೆಳಗೆ ಬಿದ್ದಿದೆ. ಆ ಸಂದರ್ಭದಲ್ಲಿ ಆತ ತಕ್ಷಣವೇ ತನ್ನ ಮನೆಯರನ್ನು ಎಚ್ಚರಿಸಿದ್ದಾನೆ. ಬಳಿಕ ಕಟ್ಟಡದಲ್ಲಿರುವ ಎಲ್ಲರನ್ನೂ ಎಚ್ಚರಿಸಿ ಹೊರಗಡೆ ಕರೆದುಕೊಂಡು ಬಂದಿದ್ದಾನೆ. ಆ ಬಳಿಕ ಕಟ್ಟಡವು ಕೆಳಕ್ಕುರುಳಿದೆ.



Provided by

ಈ ಕಟ್ಟದವನ್ನು ಖಾಲಿ ಮಾಡುವಂತೆ ಒಂಬತ್ತು ತಿಂಗಳ ಹಿಂದೆಯೇ ಅಲ್ಲಿನ ನಿವಾಸಿಗಳಿಗೆ ತಿಳಿಸಲಾಗಿತ್ತು.  ಆದರೆ, ತೀವ್ರ ಆರ್ಥಿಕ ಸಂಕಷ್ಟದ ಕಾರಣ ಯಾರು ಕೂಡ ಕಟ್ಟಡ ಖಾಲಿ ಮಾಡಿರಲಿಲ್ಲ. ಸ್ಥಳೀಯಾಡಳಿತ ನೋಟಿಸ್ ನೀಡಿ ,ಕೈತೊಳೆದುಕೊಂಡಿತ್ತು.


ಇತ್ತೀಚಿನ ಸುದ್ದಿ