90 ವರ್ಷದ ವೃದ್ಧೆಯ ಮೇಲೆ ಸಾಮೂಹಿಕ ಅತ್ಯಾಚಾರ!
31/10/2020
ತ್ರಿಪುರ: 90 ವರ್ಷದ ವೃದ್ಧೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಘಟನೆ ತ್ರಿಪುರದ ಕಾಂಚನ್ಪುರದ ಬರ್ ಹಳ್ದಿಯಲ್ಲಿ ನಡೆದಿದ್ದು, ಅಕ್ಟೋಬರ್ 24ರಂದು ನಡೆದಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಅತ್ಯಾಚಾರ ಎಸಗಿದ ಆರೋಪಿಗಳ ಪೈಕಿ ಓರ್ವ ಸಂತ್ರಸ್ತೆಯನ್ನು ಅಜ್ಜಿ ಎಂದೇ ಕರೆಯುತ್ತಿದ್ದ ಎಂದು ತಿಳಿದು ಬಂದಿದೆ. ಆ ದಿನ ತನ್ನ ಸ್ನೇಹಿತನ ಜೊತೆಗೆ ಸೇರಿ ಅಜ್ಜಿಯ ಮನೆಯ ಬಾಗಿಲು ಮುರಿದು ಪ್ರವೇಶಿಸಿದ್ದು, ಅಜ್ಜಿಯನ್ನು ಸಾಮೂಹಿಕವಾಗಿ ಅತ್ಯಾಚಾರ ನಡೆಸಿದ್ದಾರೆ.
ಅತ್ಯಾಚಾರ ಬಳಿಕ ವೃದ್ಧೆ ಯಾರಿಗೂ ಈ ವಿಷಯ ತಿಳಿಸಿರಲಿಲ್ಲ. ವೃದ್ಧೆ ಅನಾರೋಗ್ಯಕ್ಕೀಡಾದಾಗ ಈ ವಿಚಾರ ಸಂಬಂಧಿಕರಿಗೂ ಗೊತ್ತಾಗಿದೆ. ಬಳಿಕ ಅವರು ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.