ಕೇಂದ್ರದ ವಿರುದ್ಧ ರೈತರು ಹಲ್ಲು ಕಚ್ಚಿ, ಮುಷ್ಟಿ ಎತ್ತಿ ಹೋರಾಡಿ | ತೆಲಂಗಾಣ ಸಿಎಂ  ಚಂದ್ರಶೇಖರ್ ರಾವ್ ಕರೆ - Mahanayaka

ಕೇಂದ್ರದ ವಿರುದ್ಧ ರೈತರು ಹಲ್ಲು ಕಚ್ಚಿ, ಮುಷ್ಟಿ ಎತ್ತಿ ಹೋರಾಡಿ | ತೆಲಂಗಾಣ ಸಿಎಂ  ಚಂದ್ರಶೇಖರ್ ರಾವ್ ಕರೆ

31/10/2020

ಹೈದರಾಬಾದ್: ಕೇಂದ್ರದ ವಿರುದ್ಧ ರೈತರು ಹಲ್ಲು ಕಚ್ಚಿ, ಮುಷ್ಟಿ ಎತ್ತಿ ಹೋರಾಡಬೇಕು ಎಂದು ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಶನಿವಾರ ಕರೆ ನೀಡಿದರು.



Provided by

ಜಂಗಾಂವ್ ಜಿಲ್ಲೆಯ ಕೊಡಕಂಡ್ಲದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ  ಅವರು, ಪ್ರಧಾನಿ ನರೇಂದ್ರ ಮೋದಿ ಸರ್ಕಾರಕ್ಕೆ ರೈತರ ಬಗ್ಗೆ ಯಾವುದೇ ಪ್ರೀತಿ ಇಲ್ಲ. ಭಾರತದ ಆಹಾರ ನಿಗಮ(ಎಫ್‌ಸಿಐ), ಭತ್ತದ ರೈತರಿಗೆ ಕನಿಷ್ಠ ಬೆಂಬಲ ಬೆಲೆ(ಎಂಎಸ್‌ಪಿ)ಗಿಂತ ಹೆಚ್ಚಿನ ಮೊತ್ತವನ್ನು ಪಾವತಿಸಲು ರಾಜ್ಯ ಸರ್ಕಾರಗಳಿಗೆ ಅವಕಾಶ ನೀಡದ ಕೇಂದ್ರ ಸರ್ಕಾರದ ನೀತಿಗಳ ವಿರುದ್ಧ ಹೋರಾಡ ಬೇಕು ಎಂದು ಹೇಳಿದರು.


ಭತ್ತವನ್ನು ಕ್ವಿಂಟಲ್‌ಗೆ 1,888 ರೂ.ಗೆ ಖರೀದಿಸಬೇಕು ಎಂದು ಎಫ್‌ಸಿಐ ಅತ್ಯಂತ ಸ್ಪಷ್ಟವಾಗಿ ಹೇಳಿದೆ. ಕೇಂದ್ರ ಸರ್ಕಾರಕ್ಕೆ ರೈತರ ಬಗ್ಗೆ ಯಾವುದೇ ಕಾಳಜಿ ಇಲ್ಲ. ಮೋದಿ ಸರ್ಕಾರದ ವಿರುದ್ಧ ರೈತರು ಹಲ್ಲು ಕಚ್ಚಿ, ಮುಷ್ಟಿ ಎತ್ತಿ ಹೋರಾಟ ನಡೆಸಬೇಕು ಎಂದು ಅವರು ಹೇಳಿದರು.


ಇತ್ತೀಚಿನ ಸುದ್ದಿ