ನಡುಗಿದ ಭೂಮಿ: ತೈವಾನ್ ನಲ್ಲಿ ಪ್ರಬಲ ಭೂಕಂಪನ

05/04/2024
ತೈವಾನ್ ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪವು ಸಂಭವಿಸಿದೆ. ಭೂಕಂಪದಿಂದಾಗಿ ದಕ್ಷಿಣ ಜಪಾನ್ ಹಾಗೂ ಫಿಲಿಪೈನ್ಸ್ ದ್ವೀಪಗಳಿಗೆ ಸುನಾಮಿ ಎಚ್ಚರಿಕೆಗಳನ್ನು ಸಹ ನೀಡಲಾಗಿದೆ.
ತೈವಾನ್ ನ ಹುವಾಲಿಯನ್ ನಗರದಿಂದ ದಕ್ಷಿಣಕ್ಕೆ 18 ಕಿ.ಮೀ, 34.8 ಕಿ.ಮೀ ಆಳದಲ್ಲಿ ಈ ಭೂಕಂಪದ ಕೇಂದ್ರಬಿಂದು ಇದೆ ಎಂದು ತಿಳಿದುಬಂದಿದೆ. ಭೂಕಂಪದಿಂದಾಗಿ ನಗರದ ಹಲವೆಡೆ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ಜನರು ಪರದಾಡುವ ಸ್ಥಿತಿ ಉಂಟಾಗಿದೆ. ಜೊತೆಗೆ ಭೂಕಂಪದಿಂದಾಗಿ ಹುವಾಲಿಯನ್ ನಗರದಲ್ಲಿನ ಕೆಲವು ಕಟ್ಟಡಗಳು ಕುಸಿದಿವೆ. ಇನ್ನು ಶಾಂಘೈ ತನಕ ಭೂಕಂಪದ ಅನುಭವ ಉಂಟಾಗಿದೆ ಎನ್ನಲಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth