ಲವ್ ಲೆಟರ್ ಕೊಟ್ಟ ವಿದ್ಯಾರ್ಥಿಗೆ ಬಾಸುಂಡೆ ಬರುವಂತೆ ಥಳಿಸಿದ ಶಿಕ್ಷಕಿ - Mahanayaka

ಲವ್ ಲೆಟರ್ ಕೊಟ್ಟ ವಿದ್ಯಾರ್ಥಿಗೆ ಬಾಸುಂಡೆ ಬರುವಂತೆ ಥಳಿಸಿದ ಶಿಕ್ಷಕಿ

love
31/01/2022


Provided by

ಉತ್ತರಕನ್ನಡ: ಸಹಪಾಠಿಗೆ ಲವ್ ಲೆಟರ್ ಕೊಟ್ಟ 6ನೇ ತರಗತಿ ವಿದ್ಯಾರ್ಥಿಗೆ ಶಿಕ್ಷಕಿಯೊಬ್ಬರು ಬಾಸುಂಡೆ ಬರುವಂತೆ ಥಳಿಸಿದ ಘಟನೆ ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ಪಟ್ಟಣದಲ್ಲಿ ನಡೆದಿದೆ.

ಕಲ್ಪನಾ ಹೆಗಡೆ ಎಂಬ ಶಿಕ್ಷಕಿ ಹಲ್ಲೆ ನಡೆಸಿದವರು ಎಂದು ತಿಳಿದು ಬಂದಿದೆ. ಇಲ್ಲಿನ ಹೊನ್ನಾವರ ಸರ್ಕಾರಿ ಶಾಲೆಯಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. 6ನೇ ತರಗತಿಯ ವಿದ್ಯಾರ್ಥಿ ತನ್ನ ಸಹಪಾಠಿಗೆ ಲವ್ ಲೆಟರ್ ನೀಡಿದ್ದು, ವಿದ್ಯಾರ್ಥಿಯ ವರ್ತನೆಯಿಂದ ಕೋಪಗೊಂಡ ಶಿಕ್ಷಕಿ ಥಳಿಸಿದ್ದಾರೆ ಎನ್ನಲಾಗಿದೆ.

ವಿದ್ಯಾರ್ಥಿಗೆ ಬಾಸುಂಡೆ ಬರುವಂತೆ ಥಳಿಸಿದ ಶಿಕ್ಷಕಿಯ ನಡೆಯನ್ನು ಪ್ರಶ್ನಿಸಿದ ಪೋಷಕರು ಶಿಕ್ಷಕಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಶಿಕ್ಷಕಿ ಕ್ಷಮೆಯಾಚಿಸಿದ ಬಳಿಕ ಈ ವಿಚಾರ ಸುಖಾಂತ್ಯವಾಗಿದೆ ಎಂದು ವರದಿಯಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಕಾರು ಚಲಾಯಿಸಿದ ಬಾಲಕ: ಫುಟ್ಪಾತ್ ನಲ್ಲಿ ಕುಳಿತಿದ್ದ ನಾಲ್ವರು ಮಹಿಳೆಯರ ದಾರುಣ ಸಾವು

ರಸ್ತೆಯ ಗುಂಡಿಗೆ ಮತ್ತೊಂದು ಬಲಿ: ನಿಲ್ಲದ ರಕ್ತದಾಹ

ನಿಜವಾದ ಹಿಂದುತ್ವವಾದಿಗಳಾಗಿದ್ದರೆ ಜಿನ್ನಾನ ಕೊಲೆ ಮಾಡಬೇಕಿತ್ತು, ಗಾಂಧಿಯನ್ನಲ್ಲ | ಬಿ.ಕೆ.ಹರಿಪ್ರಸಾದ್

ನಡು ರಸ್ತೆಯಲ್ಲಿ ತನ್ನ ವಾಹನಕ್ಕೆ ತಾನೇ ಬೆಂಕಿ ಹಚ್ಚಿದ ಮಾಲಿಕ!

ಇತ್ತೀಚಿನ ಸುದ್ದಿ