ಒಂದು ಊರಿನ ಜನರನ್ನೇ ದೇಶದ್ರೋಹಿಗಳು ಎಂದ ಹಿಂದೂ ಸಂಘಟನೆ ಮುಖಂಡ : ದೂರು ದಾಖಲು - Mahanayaka

ಒಂದು ಊರಿನ ಜನರನ್ನೇ ದೇಶದ್ರೋಹಿಗಳು ಎಂದ ಹಿಂದೂ ಸಂಘಟನೆ ಮುಖಂಡ : ದೂರು ದಾಖಲು

patrakodi
15/03/2023


Provided by

ಮಾರ್ಚ್ 12–03–2023 ರಂದು ದಕ್ಷಿಣ ಕನ್ನಡ ಜಿಲ್ಲೆಯ ಮಿತ್ತೂರು ಜಂಕ್ಷನ್ ನಲ್ಲಿ ನಡೆದ ಹಿಂದೂ ಜಾಗರಣ ವೇದಿಕೆಯ ಪ್ರತಿಭಟನೆಯಲ್ಲಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಭಾಷಣ ಮಾಡಿದ ಹಿಂದೂ ಸಂಘಟನೆಯೊಂದರ ಮುಖಂಡ  ನೀಡಿರುವ ವಿವಾದಾತ್ಮಕ ಹೇಳಿಕೆ ವಿರುದ್ಧ ದೂರು ದಾಖಲಿಸಲಾಗಿದೆ.

ಮಾಣಿ ನರಸಿಂಹ ಎಂಬುವವರು ಕೆದಿಲ ಗ್ರಾಮದ ಪಾಟ್ರಕೋಡಿಯನ್ನು ಮಿನಿ ಪಾಕಿಸ್ತಾನ ಎಂದು ಹೇಳಿಕೆ ನೀಡಿದ್ದು, ಭಾರೀ ವಿವಾದಕ್ಕೆ ಗುರಿಯಾಗಿದೆ. ಅಲ್ಲದೇ ಅಲ್ಲಿ ಜೀವಿಸುವ ನಾಗರಿಕರನ್ನು ದೇಶದ್ರೋಹಿಗಳು, ದನಕಳ್ಳರು ಎಂದು ಆರೋಪಿಸಿದ್ದನ್ನು ಖಂಡಿಸಿ ಪಾಟ್ರಕೋಡಿಯ ನಾಗರಿಕರು ವಿಟ್ಲ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಿ ನರಸಿಂಹನ ಮೇಲೆ ಎಫ್ ಐಆರ್ ದಾಖಲಿಸಲು ಠಾಣಾ ಆರಕ್ಷಕರಲ್ಲಿ ಮನವಿ ಸಲ್ಲಿಸಿದರು.

ಪಾಟ್ರಕೋಡಿ ಒಂದು ಮಿನಿ ಪಾಕಿಸ್ತಾನ, ಎಲ್ಲ ದೇಶದ್ರೋಹಿಗಳು ಮತ್ತು ದನಕಳ್ಳರು ಇರುವಂತಹ ದೊಡ್ಡ ಜಾಗ ಎಂದು ಮಾಣಿ ನರಸಿಂಹ ಹೇಳಿಕೆ ನೀಡಿದ್ದು, ಇದರ ವಿರುದ್ಧ ಇಲ್ಲಿನ ನಾಗರಿಕರು ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೊರೆ ಹೋಗಿದ್ದು, ದೂರು ದಾಖಲಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ