ಚಾಮರಾಜನಗರದಲ್ಲಿ ಸೋಮಣ್ಣ ಅವರಿಂದ ಸಾಲುಸಾಲು ಬಹಿರಂಗ ಸಭೆ: ಮತಬೇಟೆ ಶುರು - Mahanayaka
11:25 PM Friday 11 - September 2026

ಚಾಮರಾಜನಗರದಲ್ಲಿ ಸೋಮಣ್ಣ ಅವರಿಂದ ಸಾಲುಸಾಲು ಬಹಿರಂಗ ಸಭೆ: ಮತಬೇಟೆ ಶುರು

somanna
15/04/2023

ಚಾಮರಾಜನಗರ: ವರುಣಾ ಬಳಿಕ ಚಾಮರಾಜನಗರದಲ್ಲಿ ಇಂದಿನಿಂದ ಬಿಜೆ ಅಭ್ಯರ್ಥಿ ವಿ.ಸೋಮಣ್ಣ ಮತಬೇಟೆ ಆರಂಭಿಸಿದ್ದು ಚಾಮರಾಜನಗರ ತಾಲೂಕಿನ ಜಿಪಂ ಕ್ಷೇತ್ರಗಳಲ್ಲಿ ಬಹಿರಂಗ ಸಭೆಗಳನ್ನು ನಡೆಸಿದರು.

ಕೂಡ್ಲೂರು ಮಂಟೇಸ್ವಾಮಿ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸುವ ಮೂಲಕ ಪ್ರಚಾರ ಆರಂಭಿಸಿದ ಸೋಮಣ್ಣ, ಆಲೂರು, ಚಂದಕವಾಡಿ, ಅರಕಲವಾಡಿ ಗ್ರಾಮಗಳಲ್ಲಿ ಬಹಿರಂಗ ಸಭೆ ನಡೆಸಿ ತಮಗೆ ಒಂದು ಅವಕಾಶ ಕೊಡುವಂತೆ ಕೈ ಮುಗಿದು ಪ್ರಾರ್ಥಿಸಿದರು.

ಚಂದಕವಾಡಿ ಗ್ರಾಮದಲ್ಲಿ ನಡೆದ ಬಹಿರಂಗ ಸಮಾವೇಶದಲ್ಲಿ ಅವರು ಮಾತನಾಡಿ, ನಾನು ಕೇಳಿಕೊಂಡು ಚಾಮರಾಜನಗರಕ್ಕೆ ಬರಲಿಲ್ಲ, ಮನೆಯಲ್ಲಿ ಮಲಗಿದ್ದರೂ 20 ಸಾವಿರ ಮತಗಳ ಅಂತರದಿಂದ ಗೋವಿಂದರಾಜನಗರದಲ್ಲಿ ಗೆಲ್ಲುತ್ತಿದ್ದೆ, ವರಿಷ್ಠರು ದೂರದೃಷ್ಟಿ ಇಟ್ಟುಕೊಂಡು ನನ್ನನ್ನು ಇಲ್ಲಿಗೆ ಕಳುಹಿಸಿದ್ದು ನನ್ನನ್ನು ಬರಿಗೈಯಲ್ಲಿ ಕಳುಹಿಸಬೇಡಿ ಕಳುಹಿಸಿದರೇ ನಿಮಗೇ ಲಾಸ್ ಎಂದರು.

ನಾನು ನನ್ನ ಮಗನಿಗೆ ಟಿಕೆಟ್ ಕೇಳ್ದೆ ಆದರೆ ನಿನಗೇ ಇನ್ನೂ ಶಕ್ತಿ ಇದೆ ಎಂದು ಹೇಳಿ ಎರಡು ಟಿಕೆಟ್ ಕೊಟ್ಟರು. ಚಾಮರಾಜನಗರದ 4 ಕ್ಷೇತ್ರಗಳಲ್ಲೂ ಬಿಜೆಪಿ ಗೆಲ್ಲಬೇಕಿದ್ದು ಪಕ್ಷಗಳನ್ನೆಲ್ಲಾ ಬದಿಗಿಟ್ಟು ನನಗೆ ಮತ ಕೊಡಿ, ನಿಮ್ಮ ಮತದ ಮೌಲ್ಯವನ್ನು ಅಭಿವೃದ್ಧಿ ಮೂಲಕ ತೋರಿಸುತ್ತೇನೆ, 13 ರ ತನಕ ಸೋಮಣ್ಣ ಅದಾದ ಬಳಿಕ ನಾನು ನಿಮ್ಮೆಲ್ಲರ ಸೇವಕ, 24*7 ನಿಮ್ಮ ಸೇವೆ ಮಾಡುತ್ತೇನೆ, 3 ಸಾರಿ ಅವರಿಗೆ ಅವಕಾಶ ಕೊಟ್ಟಿದ್ದೀರಿ, ಒಂದು ಸಾರಿ ನನಗೆ ಅವಕಾಶ ಕೊಡಿ ಎಂದು ಮನವಿ ಮಾಡಿದರು.

ಗೋ ಬ್ಯಾಕ್ ಎಂದವರು ಜೊತೆ ಜೊತೆಯಲಿ:

ಟಿಕೆಟ್ ಘೋಷಣೆಗೂ ಮುನ್ನ ಗೋ ಬ್ಯಾಕ್ ಸೋಮಣ್ಣ ಎಂದಿದ್ದ ಶಕ್ತಿ ಕೇಂದ್ರದ ಪ್ರಮುಖರು ಹಾಗೂ ಟಿಕೆಟ್ ಘೋಷಣೆಯಾದ ಬಳಿಕ ಅಸಮಾಧಾನಗೊಂಡಿದ್ದ ಪ್ರೊ.ಮಲ್ಲಿಕಾರ್ಜುನಪ್ಪ ಮತ್ತಿತರರು ವೇದಿಕೆ ಹಂಚಿಕೊಂಡು ಒಗ್ಗಟ್ಟು ಪ್ರದರ್ಶನ ಮಾಡಿದರು. ಸೋಮಣ್ಣ ಎಂದರೆ ಅಭಿವೃದ್ಧಿ, ಸೋಮಣ್ಣ ಎಂದರೆ ಕಾರ್ಯಕ್ಷಮತೆ ಎಂದು ಬ್ಯಾಟಿಂಗ್ ಬೀಸಿದರು.

ವರುಣ ಬಗ್ಗೆ ಹೆಚ್ಚು ಗಮನ ಕೊಡಬೇಕಿರುವುದರಿಂದ ಚಾಮರಾಜನಗರಕ್ಕೆ ಹೆಚ್ಚು ಬರಲಾಗಲ್ಲ, ಇಲ್ಲಿನ ಮುಖಂಡರು, ಕಾರ್ಯಕರ್ತರೇ ಓಡಾಡಿ ಬಿಜೆಪಿ ಸಾಧನೆಗಳನ್ನು ತಿಳಿಸಿ ಅಭ್ಯರ್ಥಿ ಗೆಲುವಿಗೆ ಸಹಕರಿಸಬೇಕೆಂದು ಸೋಮಣ್ಣ ಕೋರಿದರು.

ಒಟ್ಟಿನಲ್ಲಿ ಸೋಮಣ್ಣ ಅವರ ಚಾಮರಾಜನಗರದ ಮತಬೇಟೆ ಆರಂಭವಾಗಿದ್ದು ತಮ್ಮದೇ ಸ್ಟೈಲಿನಲ್ಲಿ ಮುಖಂಡರ ಮೂಲಕ ಮತ ಬೇಟೆ ಆರಂಭಿಸಿದ್ದು ಕಾರ್ಯಕರ್ತರಲ್ಲಿ ಯುದ್ದೋತ್ಸಾಹ ತುಂಬಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

 

ಇತ್ತೀಚಿನ ಸುದ್ದಿ

mobil chat sitesi Ucuz Uçak Bileti deneme bonusu veren siteler deneme bonusu veren siteler