ಬೈಕ್ ಕಳ್ಳತನ ಮಾಡುತ್ತಿದ್ದ ಕುಖ್ಯಾತ ಆರೋಪಿಯ ಬಂಧನ - Mahanayaka

ಬೈಕ್ ಕಳ್ಳತನ ಮಾಡುತ್ತಿದ್ದ ಕುಖ್ಯಾತ ಆರೋಪಿಯ ಬಂಧನ

bangalore
30/06/2023


Provided by

ಬೆಂಗಳೂರು ದಕ್ಷಿಣ ವಿಭಾಗ, ವಿ.ವಿ ಪುರಂ ಉಪ-ವಿಭಾಗದ ಪೊಲೀಸರಿಂದ  ವಿಲಾಸಿತನಕ್ಕಾಗಿ ದ್ವಿಚಕ್ರ ವಾಹನ ಕಳ್ಳತನ ಮಾಡುತ್ತಿದ್ದ  ಕುಖ್ಯಾತ ಆರೋಪಿಯನ್ನು ಬಂಧಿಸಲಾಗಿದೆ.

ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ದ್ವಿಚಕ್ರ ವಾಹನದ ಕಳವು ಪ್ರಕರಣಗಳಲ್ಲಿ ತನಿಖೆಯಲ್ಲಿರುವ ಸಮಯದಲ್ಲಿ ರೂಢಿಗತ ಅಪರಾಧಿಗಳನ್ನು ವಿಚಾರಣೆ ಮಾಡುವಾಗ, ಕೆ.ಎಸ್. ಲೇಔಟ್‌ ನ ಒಬ್ಬ ಆಸಾಮಿಯು ತಾನು ದ್ವಿಚಕ್ರ ವಾಹನವನ್ನು ಕಳ್ಳತನ ಮಾಡಿರುವ ಬಗ್ಗೆ ಒಪ್ಪಿಕೊಂಡಿದ್ದು, ಆತನನ್ನು ದಸ್ತಗಿರಿ ಮಾಡಿ, ಆರೋಪಿಯ ವಶದಿಂದ 7 ದ್ವಿ-ಚಕ್ರ ವಾಹನಗಳ ಅಂದಾಜು ಬೆಲೆ 3,60,000/-ರೂ ಮೌಲ್ಯದ ಮಾಲುಗಳನ್ನು ಆರೋಪಿಯಿಂದ ಅಮಾನತ್ತುಪಡಿಸಿಕೊಳ್ಳಲಾಗಿರುತ್ತದೆ.

ಆರೋಪಿ  ತನ್ನ ವಿಲಾಸಿ ಜೀವನಕ್ಕಾಗಿ ದ್ವಿ-ಚಕ್ರ ವಾಹನ ಕಳ್ಳತನ ಮಾಡುತ್ತಿದ್ದ ಎಂಬುದಾಗಿ ತನಿಖಾಧಿಕಾರಿಯವರಿಗೆ ತಿಳಿಸಿರುತ್ತಾನೆ.

ಬೆಂಗಳೂರು ನಗರ, ದಕ್ಷಿಣ ವಿಭಾಗದ ಉಪ-ಪೊಲೀಸ್‌ ಆಯುಕ್ತರು ಪಿ. ಕೃಷ್ಣಕಾಂತ್, ಐ.ಪಿ.ಎಸ್ ರವರ ಮಾರ್ಗದರ್ಶನದಲ್ಲಿ ಎ.ವಿ ಪುರಂ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ನಾಗರಾಜ ಜಿ ರವರ ಉಸ್ತುವಾರಿಯಲ್ಲಿ ಸಿ.ಕೆ ಅಚ್ಚುಕಟ್ಟು ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್‌ ಜೆ. ಉದಯರವಿ ರವರು ಹಾಗೂ ಪೊಲೀಸ್‌ ಸಿಬ್ಬಂದಿರವರುಗಳು ಆರೋಪಿಯನ್ನು ಬಂಧಿಸಿ ಮಾಲುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ಸಿಯಾಗಿರುತ್ತಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ