ಸಿಲಿಕಾನ್ ಸಿಟಿಯಲ್ಲಿ  ಡಬಲ್ ಮರ್ಡರ್! - Mahanayaka

ಸಿಲಿಕಾನ್ ಸಿಟಿಯಲ್ಲಿ  ಡಬಲ್ ಮರ್ಡರ್!

silicon city
11/07/2023

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ  ಡಬಲ್ ಮರ್ಡರ್ ನಡೆದಿದೆ.ಇಬ್ಬರನ್ನೂ ಹತ್ಯೆಗೈದಿರುವ ಘಟನೆ ಬೆಂಗಳೂರಿನ ಅಮೃತಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ

ಏರೋನಿಕ್ಸ್ ಇಂಟರ್ನೆಟ್ ಕಂಪನಿಯ ಎಂಡಿ ಫಣೀಂದ್ರ ಸುಬ್ರಮಣ್ಯ, ಸಿಇಒ ವಿನು ಕುಮಾರ್ ಮೃತ ದುರ್ದೈವಿಗಳು. ಕಂಪನಿಯ ಮಾಜಿ ಉದ್ಯೋಗಿ ಫೆಲಿಕ್ಸ್  ಕೊಲೆ ಆರೋಪಿಯಾಗಿದ್ದು, ಏರೋನಿಕ್ಸ್ ಸಂಸ್ಥೆಯ ಮಾಜಿ ಉದ್ಯೋಗಿ ಫೆಲಿಕ್ಸ್ ಕೆಲಸ ಬಿಟ್ಟು ಸ್ವಂತ ಕಂಪನಿ ಆರಂಭಿಸಿದ್ದ. ಆದ್ರೆ ತನ್ನ ಉದ್ಯಮಕ್ಕೆ ಫಣೀಂದ್ರ ಎದುರಾಳಿಯಾಗಿದ್ದರಿಂದ ಆತನನ್ನೇ ಮುಗಿಸಲು ಸ್ಕೆಚ್ ಹಾಕಿದ್ದ.

ಅದರಂತೆ ಮಂಗಳವಾರ ಸಂಜೆ 4 ಗಂಟೆ ವೇಳೆಗೆ ಇನ್ನೂ ಇಬ್ಬರೊಂದಿಗೆ ಕಂಪನಿಗೆ ಎಂಟ್ರಿ ಕೊಟ್ಟ ಫೆಲಿಕ್ಸ್, ತಲ್ವಾರ್ ಮತ್ತು ಚಾಕುವಿನಿಂದ ಫಣೀಂದ್ರ ಹಾಗೂ ವಿನು ಕುಮಾರ್ ಮೇಲೆ ದಾಳಿ ಮಾಡಿದ್ದಾರೆ. ದಾಳಿ ಬಳಿಕ ಮೂವರು ಹಂತಕರು ಕಟ್ಟಡದ ಹಿಂಭಾಗದ ಕಾಂಪೌಂಡ್ ಹಾರಿ ಎಸ್ಕೇಪ್ ಆಗಿದ್ದಾರೆ.

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/CnfTzNYsUl5CgUXEpffmDp

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ