ಗೋಡೆಯಲ್ಲಿ ಅಂಟಿಕೊಂಡ ಹತ್ಯೆಯಾದವ್ರ ಮಾಂಸದ ತುಂಡು: ಗಾಝಾ ನಿವಾಸಿಯ ಹೃದಯದ ಮಾತು ಕೇಳಿದ್ರೆ ಹೃದಯ ಕಣ್ಣೀರಿಡುತ್ತೆ..!

ಹತ್ಯೆಗೀಡಾದವರ ಮಾಂಸದ ತುಂಡುಗಳು ಗೋಡೆಯಲ್ಲಿ ಅಂಟಿಕೊಂಡಿವೆ. ನೋಡಿ ನಾನು ಇಲ್ಲಿ ಮಾಂಸದ ತುಂಡುಗಳನ್ನು ಸಂಗ್ರಹಿಸುತ್ತಿದ್ದೇನೆ. ಪುಟ್ಟ ಮಕ್ಕಳು, ಮಹಿಳೆಯರು, ಶಿಶುಗಳ ದೇಹದ ಭಾಗಗಳು ಇವು. ಹೀಗೆ ಮಾಡಿದವರನ್ನು ದೇವನು ಶಿಕ್ಷಿಸಲಿ ಎಂದು ಹೇಳುತ್ತಾ ಗೋಡೆಯಲ್ಲಿ ಅಂಟಿ ನಿಂತಿರುವ ಮಾಂಸ ತುಂಡುಗಳನ್ನು ಸಂಗ್ರಹಿಸುತ್ತಿದ್ದ ಗಾಝಾ ನಿವಾಸಿಯ ಹೃದಯದ ಮಾತುಗಳನ್ನು ಅಲ್ ಜಝೀರ ಚಾನಲ್ ಪ್ರಸಾರ ಮಾಡಿದೆ.
ಪಶ್ಚಿಮ ಗಾಝಾದ ಬೈತ್ ಲಹಿಯಾ ಎಂಬಲ್ಲಿಯ ಮನೆಗಳ ಮೇಲೆ ಮುನ್ಸೂಚನೆ ನೀಡದೆ ಇಸ್ರೇಲ್ ನಡೆಸಿದ ಬಾಂಬ್ ದಾಳಿಯಲ್ಲಿ ಮಹಿಳೆಯರು ಮಕ್ಕಳು ಸಹಿತ ಫೆಲೆಸ್ತೀನಿಯರು ಅತೀ ಕ್ರೂರವಾಗಿ ಹತ್ಯೆಗೈಯಲ್ಪಟ್ಟಿದ್ದಾರೆ.
ದಿನದ ಹಿಂದೆ ಇಲ್ಲಿ ಅತಿ ಘೋರ ಆಕ್ರಮಣ ನಡೆದಿತ್ತು. ಆಕ್ರಮಣದಲ್ಲಿ ಮನೆಗಳು ಮತ್ತು ಕಟ್ಟಡಗಳು ನೆಲಕಚ್ಚಿದುವಲ್ಲದೆ ಅದರ ಅಡಿಯಲ್ಲಿ ಅನೇಕರು ಸಮಾಧಿಯಾದರು. ನನ್ನ ಸಹೋದರರು ಸಾವಿಗಿಡಾಗಿದ್ದಾರೆ. ಅವರ ದೇಹದ ಮಾಂಸಗಳು ಮನೆಯ ಗೋಡೆಯಲ್ಲಿ ಅಂಟಿಕೊಂಡಿವೆ ಎಂದು ಓರ್ವ ಹೆಣ್ಣು ಮಗಳು ಹೇಳಿರುವುದನ್ನು ಅಲ್ ಜಝಿ ರಾ ಟಿವಿ ಚಾನೆಲ್ ಪ್ರಸಾರ ಮಾಡಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth