ವಿಜಯ: ಅಮೆರಿಕಾದಲ್ಲಿ ನಡೆದ ಸ್ಪೆಲ್ಲಿಂಗ್ ಬಿ ಸ್ಪರ್ಧೆಯಲ್ಲಿ ಭಾರತ ಸಂಜಾತ ಬಾಲಕನಿಗೆ ಗೆಲುವು - Mahanayaka
11:06 PM Thursday 18 - December 2025

ವಿಜಯ: ಅಮೆರಿಕಾದಲ್ಲಿ ನಡೆದ ಸ್ಪೆಲ್ಲಿಂಗ್ ಬಿ ಸ್ಪರ್ಧೆಯಲ್ಲಿ ಭಾರತ ಸಂಜಾತ ಬಾಲಕನಿಗೆ ಗೆಲುವು

31/05/2024

ಅಮೆರಿಕಾದಲ್ಲಿ ನಡೆದ ಸ್ಪೆಲ್ಲಿಂಗ್ ಬಿ ಸ್ಪರ್ಧೆಯಲ್ಲಿ ಭಾರತ ಸಂಜಾತ ಬೃಹತ್ ಸೋಮಯ್ಯ ಎಂಬ 12 ವರ್ಷದ ಹುಡುಗ ವಿಜಯಿಯಾಗಿದ್ದಾನೆ. 90 ಸೆಕೆಂಡ್ ಗಳಲ್ಲಿ 29 ಪದಗಳ ಸ್ಪೆಲ್ಲಿಂಗ್ ನ್ನು ಎಲ್ಲೂ ತಪ್ಪದೇ ಹೇಳುವ ಮೂಲಕ ಆತ 42 ಲಕ್ಷ ರೂಪಾಯಿ ಬಹುಮಾನವನ್ನು ಪಡೆದಿದ್ದಾನೆ. ಈ ಕುರಿತಾದ ವಿಡಿಯೋ ವೈರಲ್ ಆಗಿದೆ.

ಸೋಮಯ್ಯನ ಮುಂದೆ 30 ಪದಗಳಿದ್ವು. 90 ಸೆಕೆಂಡುಗಳ ಒಳಗಡೆ 29 ಪದಗಳ ಸ್ಪೆಲ್ಲಿಂಗ್ ಅನ್ನು ಸ್ಪಷ್ಟವಾಗಿ ಈತ ಹೇಳಿದ್ದಾನೆ. ಇನ್ನೊರ್ವ ಸ್ಪರ್ಧಿ ಫೈಝನ್ ಸಾಕಿ 25 ಪದಗಳ ಸ್ಪೆಲಿಂಗ್ ಅನ್ನು ಹೇಳಿದ್ದಾನೇ. ಸೋಮಯ್ಯ ಇದಕ್ಕಿಂತ ಮೊದಲು ಎರಡು ಬಾರಿ ಈ ಸ್ಪರ್ಧೆಯಲ್ಲಿ ಭಾಗಿಯಾಗಿದ್ದ. ತೆಲಂಗಾಣ ಮೂಲದ ಈತ 2022 ರಲ್ಲಿ 163ನೇ ಸ್ಥಾನ ಪಡೆದಿದ್ದ. 2023ರಲ್ಲಿ 74ನೇ ಸ್ಥಾನ ಪಡೆದಿದ್ದ. 1925ರಲ್ಲಿ ಈ ಸ್ಪೆಲ್ಲಿಂಗ್ ಬಿ ಸ್ಪರ್ಧೆ ಆರಂಭವಾಗಿತ್ತು.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ