ಗಾಝಾದಲ್ಲಿ ನಡೆಯುತ್ತಿರೋದು ಜನಾಂಗ ಹತ್ಯೆ: ಹೇಳಿಕೆ ನೀಡಿದ ನರ್ಸ್ ಕೆಲಸದಿಂದ ವಜಾ - Mahanayaka

ಗಾಝಾದಲ್ಲಿ ನಡೆಯುತ್ತಿರೋದು ಜನಾಂಗ ಹತ್ಯೆ: ಹೇಳಿಕೆ ನೀಡಿದ ನರ್ಸ್ ಕೆಲಸದಿಂದ ವಜಾ

31/05/2024

ಗಾಝಾದಲ್ಲಿ ನಡೆಯುತ್ತಿರುವುದು ಜನಾಂಗ ಹತ್ಯೆ ಎಂದು ಹೇಳಿದ ಹೆಸನ್ ಜಬಲಿಯಾ ಎಂಬ ನರ್ಸ್ ಅನ್ನು ನ್ಯೂಯಾರ್ಕ್ ಸಿಟಿ ಹಾಸ್ಪಿಟಲ್ ಕೆಲಸದಿಂದ ವಜಾ ಮಾಡಿದೆ. ಪ್ರಸವ ಸಮಯದಲ್ಲಿ ಮತ್ತು ಗರ್ಭಾವಸ್ಥೆಯಲ್ಲಿ ಮಕ್ಕಳನ್ನು ಕಳಕೊಂಡ ತಾಯಂದಿರ ನಡುವೆ ಕೆಲಸ ಮಾಡಿದ್ದನ್ನು ಪರಿಗಣಿಸಿ ಇವರಿಗೆ ಹೇಸನ್ ಪ್ರಶಸ್ತಿ ಲಭಿಸಿತ್ತು. ಈ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಅವರು ಮಾಡಿರುವ ಭಾಷಣದ ವೇಳೆ ಗಾಝಾದಲ್ಲಿ ನಡೆಯುತ್ತಿರುವುದು ಜನಾಂಗ ಹತ್ಯೆ ಎಂದು ಹೇಳಿದ್ದರು.


Provided by

ಮೇ ಏಳರಂದು ಈ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನಡೆದಿತ್ತು. ಇದಾಗಿ ಕೆಲವೇ ದಿನಗಳಲ್ಲಿ ನಿನ್ನನ್ನು ಕೆಲಸದಿಂದ ಕೈ ಬಿಡಲಾಗಿದೆ ಎಂಬ ನೋಟಿಸು ಸಿಕ್ಕಿರುವುದಾಗಿ ಹೆಸನ್ ಹೇಳಿದ್ದಾರೆ. ಗಾಝಾದ ಮೇಲಿನ ದಾಳಿಯಲ್ಲಿ ಮಹಿಳೆಯರು ಗ್ರಹಿಕೆಗೂ ಮೀರಿದ ಸಂಕಟಕ್ಕೆ ಒಳಗಾಗಿದ್ದಾರೆ ಮತ್ತು ನನ್ನನ್ನು ಅತೀವ ದುಃಖಕ್ಕೆ ಈಡುಮಾಡಿದೆ ಎಂದು ಫೆಲೆಸ್ತೀನಿ ಸಂಜಾತೆಯಾಗಿರುವ ಈ ಹೆಸನ್ ಹೇಳಿದ್ದರು.

ಗರ್ಭಿಣಿಯರು ಮತ್ತು ಮಕ್ಕಳು ವಿಧ ವಿಧವಾಗಿ ಸಂಕಟ ಪಡುತ್ತಿರುವಾಗ ಅವರನ್ನು ತಬ್ಬಿಕೊಳ್ಳಲು ತನಗೆ ಸಾಧ್ಯವಾಗದಿದ್ದರೂ ಈ ವೇದಿಕೆಯಲ್ಲಿ ನಾನು ಅವರ ಪರವಾಗಿ ಧ್ವನಿ ಎತ್ತುತ್ತೇನೆ ಎಂಬುದು ಅವರಿಗೆ ನೋವಿನಲ್ಲೂ ಸಂತಸ ಕೊಡಬಹುದು ಎಂದು ನಂಬಿದ್ದೇನೆ ಎಂದು ಅವರು ಹೇಳಿದ್ದರು.

ಇದೇ ವೇಳೆ ಗಾಝಾ ವಿಷಯದಲ್ಲಿ ವೈಯಕ್ತಿಕ ಅಭಿಪ್ರಾಯವನ್ನು ಕೆಲಸದ ಸ್ಥಳಕ್ಕೆ ತರಬಾರದು ಎಂದು ಮೊದಲೇ ಅವರಿಗೆ ನಾವು ಸೂಚಿಸಿದ್ದೇವೆ ಎಂದು ಆಸ್ಪತ್ರೆಯ ವಕ್ತಾರರು ತಿಳಿಸಿದ್ದಾರೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ