ಗಾಝಾ ದಾಳಿಯನ್ನು ಖಂಡಿಸಿ ಪ್ರತಿಭಟನೆಗೆ ನಿರ್ಧಾರ: ದಿಲ್ಲಿಯಲ್ಲಿ ಪ್ರೊಟೆಸ್ಟ್ ಗೆ ಅನುಮತಿ ನಿರಾಕರಣೆ - Mahanayaka

ಗಾಝಾ ದಾಳಿಯನ್ನು ಖಂಡಿಸಿ ಪ್ರತಿಭಟನೆಗೆ ನಿರ್ಧಾರ: ದಿಲ್ಲಿಯಲ್ಲಿ ಪ್ರೊಟೆಸ್ಟ್ ಗೆ ಅನುಮತಿ ನಿರಾಕರಣೆ

31/05/2024

ಫೆಲೆಸ್ತೀನಿನ ಗಾಝಾದಲ್ಲಿ ನಡೆಯುತ್ತಿರುವ ಸಾಮೂಹಿಕ ಹತ್ಯೆಯನ್ನು ಖಂಡಿಸಿ ಜಂತರ್ ಮಂತರ್ ನಲ್ಲಿ ನಡೆಸಲು ಉದ್ದೇಶಿಸಲಾಗಿರುವ ಪ್ರತಿಭಟನೆಗೆ ದೆಹಲಿ ಪೊಲೀಸರು ಅನುಮತಿ ನಿರಾಕರಿಸಿದ್ದಾರೆ. ಜೂನ್ ಒಂದರಂದು ನಡೆಯಲಿರುವ ಈ ಪ್ರತಿಭಟನೆ ಅನುಮತಿ ನೀಡದಿದ್ದರೂ ನಡೆಸಿಯೇ ಸಿದ್ಧ ಎಂದು ಸಂಘಟಕರು ಹೇಳಿದ್ದಾರೆ.


Provided by

ವಿವಿಧ ಸಂಘಟನೆಗಳು ಸೇರಿ ಈ ಪ್ರತಿಭಟನೆಯನ್ನು ಹಮ್ಮಿಕೊಂಡಿವೆ. ಆದರೆ ಇವತ್ತು ಬೆಳಿಗ್ಗೆ ಅನುಮತಿ ನಿರಾಕರಿಸಿರುವ ಮಾಹಿತಿಯನ್ನು ಪೊಲೀಸರು ನೀಡಿದ್ದಾರೆ. ವಿದ್ಯಾರ್ಥಿ ಸಂಘಟನೆಗಳು ಕೂಡ ಈ ಪ್ರತಿಭಟನೆಯಲ್ಲಿ ಭಾಗಿಯಾಗುವುದಾಗಿ ಘೋಷಿಸಿತ್ತು. ಸಿಪಿಎಂ ಜನರಲ್ ಸೆಕ್ರೆಟರಿ ಸೀತಾರಾಮ್ ಎಚೂರಿ ಕೂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸುವುದಾಗಿ ತಿಳಿಸಲಾಗಿದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ