ಮೋದಿ ಧ್ಯಾನ: ಮೀನುಗಾರ ಸಮುದಾಯ ಮತ್ತು ವ್ಯಾಪಾರಿಗಳು ಕಂಗಾಲು - Mahanayaka

ಮೋದಿ ಧ್ಯಾನ: ಮೀನುಗಾರ ಸಮುದಾಯ ಮತ್ತು ವ್ಯಾಪಾರಿಗಳು ಕಂಗಾಲು

31/05/2024

ಎರಡು ದಿವಸಗಳ ಧ್ಯಾನಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರು ಕನ್ಯಾಕುಮಾರಿಗೆ ಬರುವುದರೊಂದಿಗೆ ಅಲ್ಲಿನ ಮೀನುಗಾರ ಸಮುದಾಯ ಮತ್ತು ವ್ಯಾಪಾರಿಗಳು ಕಂಗಾಲಾಗಿದ್ದಾರೆ. ಪ್ರಧಾನಿಯವರಿಗೆ ರಕ್ಷಣೆ ನೀಡುವುದಕ್ಕಾಗಿ ಎರಡು ಸಾವಿರ ಪೊಲೀಸರನ್ನು ನಿಯೋಜಿಸಲಾಗಿದೆ. ಮೀನುಗಾರಿಕೆಗೆ ಮತ್ತು ವ್ಯಾಪಾರಕ್ಕೆ ಸುರಕ್ಷಿತತೆಯ ಕಾರಣ ನೀಡಿ ನಿಷೇಧ ಹೇರಲಾಗಿದೆ.


Provided by

ಈ ಎರಡು ಸಾವಿರ ಮಂದಿ ಅಲ್ಲದೆ ಪ್ರಧಾನಿಯವರ ಸುರಕ್ಷಾ ಭಟರು ಬೇರೆ ಇದ್ದಾರೆ. ಹಾಗೆಯೇ ನೌಕಾ ಸಮುದ್ರ, ತೀರ ರಕ್ಷಣಾ ಸೇನೆ ಕೂಡ ಹಡಗಿನಲ್ಲಿ ಕುಳಿತು ಕಾವಲು ಕಾಯುತ್ತಿವೆ ಎಂದು ವರದಿಯಾಗಿದೆ. ಪ್ರಧಾನಿ ಅವರ ಧ್ಯಾನದಿಂದಾಗಿ ಅಲ್ಲಿಗೆ ಬರುವ ವಿದೇಶಿ ಯಾತ್ರಿಕರನ್ನು ನಿರ್ಬಂಧಿಸಲಾಗಿದೆ. ಹಾಗೆಯೇ 5 ಕಿ.ಮೀ ವ್ಯಾಪ್ತಿಯಲ್ಲಿ ಮೀನುಗಾರಿಕೆಗೆ ನಿಷೇಧ ವಿಧಿಸಲಾಗಿದೆ. ಮೀನುಗಾರಿಕೆಯ 42 ಗ್ರಾಮಗಳಲ್ಲಿ ಕೂಡ ತೀವ್ರ ನಿಗಾ ವಹಿಸಲಾಗಿದೆ.

ಮೀನುಗಾರಿಕೆ ಸಗಿತಗೊಂಡಿರುವುದರಿಂದ ಮತ್ತು ಯಾತ್ರಿಕರ ನಿರ್ಬಂಧದಿಂದಾಗಿ ಸಂಪೂರ್ಣ ವರಮಾನ ಕುಸಿದು ಹೋಗಿದೆ, ವ್ಯಾಪಾರ ನಿಂತು ಹೋಗಿದೆ ಎಂದು ಸ್ಥಳೀಯರು ನೋವು ತೋಡಿಕೊಂಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ