ಯುದ್ಧದಿಂದ ಹಿಂದೆ ಸರಿಯದ ಇಸ್ರೇಲ್—ಇರಾನ್: 3ನೇ ದಿನವೂ ಮುಂದುವರಿದ ಸಂಘರ್ಷ - Mahanayaka

ಯುದ್ಧದಿಂದ ಹಿಂದೆ ಸರಿಯದ ಇಸ್ರೇಲ್—ಇರಾನ್: 3ನೇ ದಿನವೂ ಮುಂದುವರಿದ ಸಂಘರ್ಷ

Israel Iran war
16/06/2025

ಜೆರುಸಲೇಂ: ಇರಾನ್‌ ನ ರಕ್ಷಣಾ ಕೇಂದ್ರಗಳು, ತೈಲ ಘಟಕಗಳನ್ನು ಗುರಿಯಾಗಿಸಿಕೊಂಡು ಇಸ್ರೇಲ್ ದಾಳಿ ನಡೆಸುತ್ತಿದ್ದು, ಇತ್ತ ಇರಾನ್ ಕೂಡ ಇಸ್ರೇಲ್ ಮೇಲೆ ದಾಳಿ ನಡೆಸುತ್ತಿದೆ. ಹೋರಾಟದಿಂದ ಎರಡೂ ದೇಶಗಳು ಹಿಂದೆ ಸರಿಯುವ ಸೂಚನೆ ಸಿಗುತ್ತಿಲ್ಲ.

ಇಸ್ರೇಲ್ ತನ್ನ ತೈಲ ಸಂಸ್ಕರಣಾಗಾರಗಳನ್ನು ಹೊಡೆದುರುಳಿಸಿದೆ, ತನ್ನ ಅರೆಸೈನಿಕ ಕ್ರಾಂತಿಕಾರಿ ಗಾರ್ಡ್‌ ನ ಗುಪ್ತಚರ ಮುಖ್ಯಸ್ಥ ಮತ್ತು ಇತರ ಇಬ್ಬರು ಜನರಲ್‌ ಗಳನ್ನು ಕೊಂದಿದೆ. ಜನಸಂಖ್ಯಾ ಕೇಂದ್ರಗಳ ಮೇಲೆ ತೀವ್ರವಾದ ವೈಮಾನಿಕ ದಾಳಿ ನಡೆಸಿದೆ ಎಂದು ಇರಾನ್ ಹೇಳಿದೆ

ಟೆಹರಾನ್‌ ನಲ್ಲಿರುವ ಇರಾನ್‌ ರಕ್ಷಣಾ ಸಚಿವಾಲಯದ ಪ್ರಧಾನ ಕಚೇರಿ ಮೇಲೆ ಇಸ್ರೇಲ್‌ ಭಾನುವಾರ ಕ್ಷಿಪಣಿ ದಾಳಿ ನಡೆಸಿತ್ತು. ಇದಕ್ಕೆ ಪ್ರತಿಯಾಗಿ ಇರಾನ್‌ ನ ಕ್ಷಿಪಣಿಗಳು, ಇಸ್ರೇಲ್‌ ವಾಯುರಕ್ಷಣಾ ವ್ಯವಸ್ಥೆಯನ್ನು ಭೇದಿಸಿ, ಹಲವು ಕಟ್ಟಡಗಳನ್ನು ನಾಶಗೊಳಿಸಿವೆ.

ಸೋಮವಾರ ಬೆಳಿಗ್ಗೆ ಟೆಹರಾನ್‌ ನ ವಿವಿಧೆಡೆಯೂ ಸ್ಫೋಟಗಳು ಸಂಭವಿಸಿವೆ. ನಾಲ್ಕು ದಿನಗಳ ಸಂಘರ್ಷದಲ್ಲಿ ದೇಶದಲ್ಲಿ 224 ಮಂದಿ ಮೃತಪಟ್ಟಿದ್ದು, 1,277ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ಇರಾನ್‌ ನ ವಿಶ್ವಸಂಸ್ಥೆಯ ರಾಯಭಾರಿ ತಿಳಿಸಿದ್ದಾರೆ.

ಇನ್ನೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರನ್ನು ಕೊಲ್ಲುವ ಇಸ್ರೇಲ್ ಯೋಜನೆಯನ್ನು ವಿಫಲಗೊಳಿಸಿದ್ದಾರೆ ಎಂದು ಅಮೆರಿಕದ ಅಧಿಕಾರಿಯೊಬ್ಬರು ಅಸೋಸಿಯೇಟೆಡ್ ಪ್ರೆಸ್‌ ಗೆ ತಿಳಿಸಿದ್ದಾರೆ. ಖಮೇನಿ ಎಲ್ಲಾ ಪ್ರಮುಖ ನೀತಿಗಳ ಮೇಲೆ ಅಂತಿಮ ಅಧಿಕಾರ ಹೊಂದಿದ್ದಾರೆ, ಸಶಸ್ತ್ರ ಪಡೆಗಳ ಕಮಾಂಡರ್—ಇನ್–ಚೀಫ್ ಆಗಿ ಕಾರ್ಯನಿರ್ವಹಿಸುತ್ತಾರೆ ಮತ್ತು ಪ್ರಬಲ ಕ್ರಾಂತಿಕಾರಿ ಗಾರ್ಡ್ ನಿಯಂತ್ರಿಸುತ್ತಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ