ಟ್ರಂಪ್ ಬೆದರಿಕೆಯ ನಡುವೆಯೇ “ಯುದ್ಧ ಆರಂಭ” ಎಂದ ಇರಾನ್ ನಾಯಕ - Mahanayaka

ಟ್ರಂಪ್ ಬೆದರಿಕೆಯ ನಡುವೆಯೇ “ಯುದ್ಧ ಆರಂಭ” ಎಂದ ಇರಾನ್ ನಾಯಕ

Iran
18/06/2025

ಟೆಹ್ರಾನ್:  “ಯುದ್ಧ ಆರಂಭ”  ಎಂದು ಇರಾನ್ ನ ಪರಮೋಚ್ಛ ನಾಯಕ ಅಯತೊಲ್ಲಾ ಅಲಿ ಖಾಮಿನೈ ತಮ್ಮ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದು, ಈ ಮೂಲಕ ಇರಾನ್—ಇಸ್ರೇಲ್ ನಡುವೆ ಘೋರ ಯುದ್ಧ ಆರಂಭವಾಗುವ ಸೂಚನೆ ದೊರಕಿದೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್,  ಇಸ್ರೇಲ್ ಪರ ನಿಂತು ಇರಾನ್ ಗೆ ಬೆದರಿಕೆಯೊಡ್ಡುತ್ತಿದ್ದು, ಇರಾನ್ ನ ವಾಯು ಪ್ರದೇಶ ತನ್ನ ಹದ್ದು ಬಸ್ತಿನಲ್ಲಿದೆ. ಇರಾನ್ ನಾಯಕ ಎಲ್ಲಿದ್ದಾರೆ ಎನ್ನುವುದು ತಿಳಿದಿದೆ, ಅವರ ಹತ್ಯೆಯ ಸಮಯ ಸನ್ನಿಹಿತವಾಗಿದೆ ಎಂದು ಟ್ರಂಪ್ ಬಹಿರಂಗ ಬೆದರಿಕೆ ಹಾಕಿದ್ದರು. ಆದರೆ ಟ್ರಂಪ್ ಬೆದರಿಕೆಗೆ ಜಗ್ಗದ  ಖಾಮಿನೈ, “ಯುದ್ಧ ಆರಂಭ” ಎಂಬ ಪೋಸ್ಟ್  ಹಾಕಿದ್ದಾರೆ.

ಇಸ್ರೇಲ್ ನ ದಾಳಿಯ ವಿರುದ್ಧ ಇರಾನ್ ಪ್ರತಿಕಾರ ತೀರಿಸಿಕೊಳ್ಳುತ್ತದೆ,  ನಾವು ಯಹೂದಿಗಳಿಗೆ ಕರುಣೆ ತೋರಿಸುವುದಿಲ್ಲ ಎಂದು  ಇರಾನ್ ನಾಯಕ ಅಯತೊಲ್ಲಾ ಅಲಿ ಖಾಮಿನೈ ಸಂದೇಶ ರವಾನಿಸಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ