ಹಿಂದೂಗಳಿಗೆ ಯಾರಿಂದಲೂ ಬೆದರಿಕೆಯಿಲ್ಲ: ಮೋಹನ್ ಭಾಗವತ್ - Mahanayaka
2:32 PM Wednesday 18 - February 2026

ಹಿಂದೂಗಳಿಗೆ ಯಾರಿಂದಲೂ ಬೆದರಿಕೆಯಿಲ್ಲ: ಮೋಹನ್ ಭಾಗವತ್

mohan bhagwat
18/02/2026

ಲಕ್ನೋ: ಹಿಂದೂ ಸಮಾಜಕ್ಕೆ ಪ್ರಸ್ತುತ ಯಾರಿಂದಲೂ ನೇರ ಬೆದರಿಕೆಯಿಲ್ಲದಿದ್ದರೂ, ಸಮುದಾಯವು ಜಾಗರೂಕತೆಯಿಂದ ಇರಬೇಕು ಮತ್ತು ಸಂಘಟಿತವಾಗಬೇಕು ಎಂದು ಆರ್.ಎಸ್.ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.

ಲಕ್ನೋದಲ್ಲಿ ನಡೆದ ‘ಸಾಮಾಜಿಕ ಸೌಹಾರ್ದ’ ಸಭೆಯಲ್ಲಿ ಅವರು ಮಾತನಾಡಿದ ಅವರು,  ದೇಶದಲ್ಲಿ ಹೆಚ್ಚುತ್ತಿರುವ ಅಕ್ರಮ ಒಳನುಸುಳುವಿಕೆಯ ಬಗ್ಗೆ ಕaಳವಳ ವ್ಯಕ್ತಪಡಿಸಿ, , ಅಕ್ರಮವಾಗಿ ಬಂದವರನ್ನು ‘ಗುರುತಿಸಿ, ಪಟ್ಟಿಯಿಂದ ತೆಗೆದುಹಾಕಿ ಮತ್ತು ಗಡೀಪಾರು’ (Detect, Delete and Deport) ಮಾಡಬೇಕು ಎಂದು ಪ್ರತಿಪಾದಿಸಿದರು. ಅಲ್ಲದೆ ಅವರಿಗೆ ಉದ್ಯೋಗ ನೀಡಬಾರದು ಎಂದು ಕರೆ ನೀಡಿದರು.

ಹಿಂದೂ ಕುಟುಂಬಗಳಲ್ಲಿ ಕನಿಷ್ಠ ಮೂವರು ಮಕ್ಕಳಿರಬೇಕು ಎಂದು ಅವರು ಸಲಹೆ ನೀಡಿದರು. ಜನಸಂಖ್ಯೆ ಕುಸಿತವು ಸಮಾಜದ ಅಸ್ತಿತ್ವಕ್ಕೆ ಧಕ್ಕೆ ತರುತ್ತದೆ ಎಂದು ವಿಜ್ಞಾನಿಗಳು ಹೇಳುತ್ತಾರೆ, ಇದನ್ನು ನವವಿವಾಹಿತರಿಗೆ ಮನವರಿಕೆ ಮಾಡಿಕೊಡಬೇಕು ಎಂದು ತಿಳಿಸಿದರು.

ಬಲವಂತದ ಅಥವಾ ಆಮಿಷದ ಮತಾಂತರಗಳನ್ನು ತಡೆಯಬೇಕು. ಹಿಂದೂ ಧರ್ಮಕ್ಕೆ ಮರಳಿ ಬರುವವರನ್ನು (ಘರ್ ವಾಪಸಿ) ಪ್ರೀತಿಯಿಂದ ಬರಮಾಡಿಕೊಳ್ಳಬೇಕು ಮತ್ತು ಅವರನ್ನು ಸರಿಯಾಗಿ ನೋಡಿಕೊಳ್ಳಬೇಕು ಎಂದರು.

ಸಮಾಜದಲ್ಲಿ ಜಾತಿ ಸಂಘರ್ಷಕ್ಕೆ ಅವಕಾಶ ಇರಬಾರದು. ಎಲ್ಲರಿಗೂ ದೇವಸ್ಥಾನ, ಕುಡಿಯುವ ನೀರಿನ ಬಾವಿ ಮತ್ತು ಸ್ಮಶಾನಗಳಿಗೆ ಸಮಾನ ಪ್ರವೇಶವಿರಬೇಕು. ಸಂಘದಲ್ಲಿ ಯಾವುದೇ ಜಾತಿ ವ್ಯವಸ್ಥೆಯಿಲ್ಲ, ಅದೇ ರೀತಿ ಸಮಾಜದಲ್ಲೂ ತಾರತಮ್ಯ ಇರಬಾರದು ಎಂದು ಹೇಳಿದರು.

ಅಂತಾರಾಷ್ಟ್ರೀಯ ಪಿತೂರಿ: ಅಮೆರಿಕ ಮತ್ತು ಚೀನಾದಂತಹ ದೇಶಗಳಲ್ಲಿ ಕುಳಿತಿರುವ ಕೆಲವು ಶಕ್ತಿಗಳು ಭಾರತದ ಸಾಮರಸ್ಯವನ್ನು ಹಾಳುಮಾಡಲು ಸಂಚು ರೂಪಿಸುತ್ತಿವೆ. ಇಂತಹವರ ಬಗ್ಗೆ ದೇಶದ ಜನರು ಎಚ್ಚರಿಕೆಯಿಂದಿರಬೇಕು ಎಂದು ಅವರು ಎಚ್ಚರಿಸಿದರು.

“ಹಿಂದೂಸ್ತಾನ ಒಂದು ಹಿಂದೂ ರಾಷ್ಟ್ರ ಮತ್ತು ಎಲ್ಲಾ ಹಿಂದೂಗಳು ಸಹೋದರ ಸಂಬಂಧಿಗಳು” ಎಂಬ ತಮ್ಮ ನಿಲುವನ್ನು ಅವರು ಪುನರುಚ್ಚರಿಸಿದರು.

ಜಗತ್ತಿನ ಹಲವು ಸಮಸ್ಯೆಗಳಿಗೆ ಭಾರತದ ಬಳಿ ಪರಿಹಾರವಿದೆ ಮತ್ತು ಮುಂಬರುವ ದಿನಗಳಲ್ಲಿ ಭಾರತ ಇಡೀ ಜಗತ್ತಿಗೆ ಮಾರ್ಗದರ್ಶನ ನೀಡಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

 

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ