ಕೂವೆ ಕಲ್ಮನೆಯ ಮಧುಮಿತಾಗೆ ಡಾಕ್ಟರೇಟ್ - Mahanayaka

ಕೂವೆ ಕಲ್ಮನೆಯ ಮಧುಮಿತಾಗೆ ಡಾಕ್ಟರೇಟ್

madhumita.jpg
02/09/2026

ಕೊಟ್ಟಿಗೆಹಾರ : ಮೂಡಿಗೆರೆ ತಾಲ್ಲೂಕಿನ ಕೂವೆ ಕಲ್ಮನೆ ಗ್ರಾಮದ ವೆಂಕಟೇಶ್ ಹಾಗೂ ವಿನಯಾ ನವಾಟೆ ದಂಪತಿಯ ಪುತ್ರಿ ಡಾ. ಮಧುಮಿತಾ ಕೆ.ವಿ. ಅವರು ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ನ ಮಣಿಪಾಲ್ ತಾಂತ್ರಿಕ ಸಂಸ್ಥೆಯಿಂದ ಡಾಕ್ಟರೇಟ್ ಪದವಿ ಪಡೆದಿದ್ದಾರೆ.

‘ಗ್ರಾಫ್ ಗಳ ಸ್ಪೆಕ್ಟ್ರಾ ಮತ್ತು ಗುಪ್ತಲಿಪಿ ಶಾಸ್ತ್ರದಲ್ಲಿ ಗ್ರಾಫ್ ಪರಿಮಾಣಗಳ ಅನ್ವಯಿಕೆ’ ವಿಷಯದ ಕುರಿತು ಸಂಶೋಧನೆ ನಡೆಸಿ ಮಹಾಪ್ರಬಂಧ ಮಂಡಿಸಿದ್ದರು. ಆಗಸ್ಟ್ 3ರಂದು ನಡೆದ ಅಂತಿಮ ಮೌಖಿಕ ಪರೀಕ್ಷೆಯಲ್ಲಿ ಯಶಸ್ವಿಯಾಗಿ ಉತ್ತೀರ್ಣರಾಗಿ ಡಾಕ್ಟರೇಟ್ ಪದವಿಗೆ ಅರ್ಹತೆ ಪಡೆದಿದ್ದಾರೆ. ಸಬಿತಾ ಡಿಸೋಜಾ ಅವರು ಸಂಶೋಧನಾ ಮಾರ್ಗದರ್ಶಕರಾಗಿದ್ದರು.

ಗ್ರಾಮೀಣ ಪ್ರದೇಶದ ಕೂವೆ ಕಲ್ಮನೆಯಿಂದ ಉನ್ನತ ಶಿಕ್ಷಣದ ಹಾದಿಯಲ್ಲಿ ಮುನ್ನಡೆದು ಸಂಶೋಧನಾ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಡಾ. ಮಧುಮಿತಾ ಕೆ.ವಿ. ಅವರ ಸಾಧನೆಗೆ ತಂದೆ ವೆಂಕಟೇಶ್, ತಾಯಿ ವಿನಯಾ ನವಾಟೆ, ಬಂಧುಗಳು ಹಾಗೂ ಊರಿನ ಎಲ್ಲಾ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ