ಕಥೊಲಿಕ್ ಸಭಾ ಗಂಗೊಳ್ಳಿ ಘಟಕದಿಂದ ಪಾಂಬೂರು ಮಾನಸ ವಿಶೇಷ ಮಕ್ಕಳ ಶಾಲೆಗೆ ಭೇಟಿ ಮತ್ತು ನೆರವು - Mahanayaka
10:28 AM Tuesday 10 - November 2026

ಕಥೊಲಿಕ್ ಸಭಾ ಗಂಗೊಳ್ಳಿ ಘಟಕದಿಂದ ಪಾಂಬೂರು ಮಾನಸ ವಿಶೇಷ ಮಕ್ಕಳ ಶಾಲೆಗೆ ಭೇಟಿ ಮತ್ತು ನೆರವು

catholic sabha
16/09/2026

ಉಡುಪಿ: ಕಥೊಲಿಕ್ ಸಭಾ ಉಡುಪಿ ಪ್ರದೇಶ್ (ರಿ.) ಕೊಸೆಸಾಂವ್ ಮಾತೆಯ ಚರ್ಚ್ ಘಟಕ, ಗಂಗೊಳ್ಳಿಯ ಸದಸ್ಯರು ಇತ್ತೀಚೆಗೆ ಪಾಂಬೂರಿನ ‘ಮಾನಸ ವಿಶೇಷ ಮಕ್ಕಳ ಶಾಲೆ’ಗೆ ಭೇಟಿ ನೀಡಿ, ಅಲ್ಲಿನ ವಿದ್ಯಾರ್ಥಿಗಳೊಂದಿಗೆ ಒಂದು ದಿನವನ್ನು ಅತ್ಯಂತ ಸಡಗರದಿಂದ ಕಳೆದಿದ್ದಾರೆ.

ಕಥೊಲಿಕ್ ಸಭೆಯ ನೇತೃತ್ವದಲ್ಲೇ ಆರಂಭಗೊಂಡು ಹೆಮ್ಮರವಾಗಿ ಬೆಳೆದಿರುವ ಮಾನಸ ಸಂಸ್ಥೆಯ ವಿಶೇಷ ಮಕ್ಕಳೊಂದಿಗೆ ಬೆರೆತು, ಅವರೊಂದಿಗೆ ಕಾಲ ಕಳೆದು ಖುಷಿಪಡಿಸುವ ಸದುದ್ದೇಶದಿಂದ ಈ ಭೇಟಿಯನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮದ ಆರಂಭದಲ್ಲಿ ಮಾನಸ ಸಂಸ್ಥೆಯ ಪ್ರಾಜೆಕ್ಟ್ ಕೊಆರ್ಡಿನೇಟರ್ ಅನಿಲ್ ದಾಂತಿ ಸರ್ವರನ್ನು ಸ್ವಾಗತಿಸಿದರು. ನಂತರ ಸಂಸ್ಥೆಯ ಕೋಶಾಧಿಕಾರಿ ಜೋಸೆಫ್ ನೊರೊನ್ಹಾ ಅವರು ಸಂಸ್ಥೆಯ ಹಿನ್ನೆಲೆ ಮತ್ತು ಚಟುವಟಿಕೆಗಳ ಪರಿಚಯ ಮಾಡಿಕೊಟ್ಟರು. ಈ ವಿಶೇಷ ಭೇಟಿಯ ಸಂದರ್ಭದಲ್ಲಿ ಮಕ್ಕಳಿಗಾಗಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು ಹಾಗೂ ಮನೋರಂಜನಾ ಕಾರ್ಯಕ್ರಮಗಳ ಮೂಲಕ ಮಕ್ಕಳಲ್ಲಿ ಮಂದಹಾಸ ಮೂಡಿಸಲಾಯಿತು.

ಕಥೊಲಿಕ್ ಸಭಾ ಗಂಗೊಳ್ಳಿ ಘಟಕದ ಅಧ್ಯಕ್ಷ ಓವಿನ್ ರೆಬೆಲ್ಲೊ ಮಾತನಾಡಿ, ಮಾನಸ ಸಂಸ್ಥೆಯ ಕಾರ್ಯವೈಖರಿ, ಮಕ್ಕಳ ಶಿಸ್ತು, ಆತ್ಮೀಯತೆ ಹಾಗೂ ಸಿಬ್ಬಂದಿಗಳ ನಿಸ್ವಾರ್ಥ ಸೇವೆಯನ್ನು ಕೊಂಡಾಡಿದರು. ಜೊತೆಗೆ, ಘಟಕದ ಸದಸ್ಯರಾದ ಶೀಮತಿ ಜೆನ್ನಿ ಬುತ್ತೆಲ್ಲೊ ಹಾಗೂ ಸೆಲಿನ್ ಲೋಬೊ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಈ ಸತ್ಕಾರ್ಯದ ಭಾಗವಾಗಿ ಗಂಗೊಳ್ಳಿ ಘಟಕದ ವತಿಯಿಂದ ಸಂಸ್ಥೆಗೆ ಅಗತ್ಯ ಆಹಾರ ಸಾಮಗ್ರಿಗಳು ಹಾಗೂ ಆರ್ಥಿಕ ದೇಣಿಗೆಯನ್ನು ಹಸ್ತಾಂತರಿಸಲಾಯಿತು.

ಕಾರ್ಯಕ್ರಮದ ಕೊನೆಯಲ್ಲಿ ಘಟಕದ ಕಾರ್ಯದರ್ಶಿ ಜಾನೆಟ್ ಡಾಯಸ್ ವಂದಿಸಿದರು. ಎಲ್ರೋಯ್ ಕಿರನ್ ಕ್ರಾಸ್ಟೊ ಕಾರ್ಯಕ್ರಮ ನಿರೂಪಿಸಿದರು. ಕೋಶಾಧಿಕಾರಿ ರೋಶನ್ ಲೋಬೊ ಹಾಗೂ ಕಾರ್ಯಕ್ರಮದ ಸಂಚಾಲಕ ಅಗಪಿತಾಸ್ ಫ್ರೆಂಕಿ ರೆಬೆರೊ ಕಾರ್ಯಕ್ರಮದ ಯಶಸ್ಸಿಗೆ ಕೈಜೋಡಿಸಿ ಸಹಕರಿಸಿದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

deneme bonusu veren siteler gamdom giriş deneme bonusu veren siteler