ಬೆತ್ತಲಾಗುವಂತೆ ಪದೇ ಪದೇ ವಿಡಿಯೋ ಕಾಲ್ ಮಾಡುತ್ತಿದ್ದ ಡಿಐಜಿಗೆ ಶಾಕ್ ನೀಡಿದ ಕೈದಿಯ ಪತ್ನಿ!   - Mahanayaka
9:04 AM Tuesday 10 - November 2026

ಬೆತ್ತಲಾಗುವಂತೆ ಪದೇ ಪದೇ ವಿಡಿಯೋ ಕಾಲ್ ಮಾಡುತ್ತಿದ್ದ ಡಿಐಜಿಗೆ ಶಾಕ್ ನೀಡಿದ ಕೈದಿಯ ಪತ್ನಿ!  

former dig somashekhar
07/10/2026

ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಸುಪ್ರೀಂ ಕೋರ್ಟ್ ಆದೇಶವನ್ನು ನಕಲು ಮಾಡಿ ಜೀವಾವಧಿ ಶಿಕ್ಷಾ ಕೈದಿಯನ್ನು ಬಿಡುಗಡೆ ಮಾಡಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದೊಂದೇ ಸ್ಫೋಟಕ ಮಾಹಿತಿಗಳು ಹೊರಬಿದ್ದಿವೆ. ಜೈಲಿನ ಮಾಜಿ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಕರಾಳ ಮುಖ ಬಯಲಾಗಿದ್ದು, ಪ್ರಕರಣದ ಹಿಂದೆ ಬೃಹತ್ ವಂಚನಾ ಜಾಲವಿರುವುದು ತನಿಖೆಯಿಂದ ತಿಳಿದುಬಂದಿದೆ.

ಕಾರಾಗೃಹ ಇಲಾಖೆಯ ಡಿಜಿಪಿಗೆ ಬಂದ ಅನಾಮಧೇಯ ಪತ್ರವೊಂದರಿಂದ ಈ ವಂಚನೆ ಪ್ರಕರಣದ ಸುಳಿವು ಸಿಕ್ಕಿತ್ತು. ಇದರ ಆಧಾರದ ಮೇಲೆ ಇಲಾಖಾ ತನಿಖೆ ನಡೆಸಿದಾಗ, ಅಪಹರಣ ಮತ್ತು ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಎ.ಶಂಕರ್ ಎಂಬ ಕೈದಿಯನ್ನು ಬಿಡುಗಡೆ ಮಾಡಲು ಸುಪ್ರೀಂ ಕೋರ್ಟ್ ಆದೇಶವನ್ನೇ ನಕಲು ಮಾಡಲಾಗಿರುವುದು ದೃಢಪಟ್ಟಿತ್ತು. 2018ರಲ್ಲಿ ಪರಪ್ಪನ ಅಗ್ರಹಾರ ಜೈಲಿನ ಅಧೀಕ್ಷಕರಾಗಿದ್ದ ಸೋಮಶೇಖರ್, ಜೈಲಿಗೆ ಭೇಟಿ ನೀಡುತ್ತಿದ್ದ ಕೈದಿ ಶಂಕರ್ ಪತ್ನಿಯನ್ನು ಪರಿಚಯಿಸಿಕೊಂಡು ಈ ಕೃತ್ಯಕ್ಕೆ ಅಡಿಪಾಯ ಹಾಕಿದ್ದರು. ಜೈಲಿನಲ್ಲಿ ಎಸ್‌ಡಿಎ ಸಿಬ್ಬಂದಿಯಾಗಿದ್ದ ಶ್ರೀಕಾಂತ್ ಈ ಮಹಿಳೆಯನ್ನು ಡಿಐಜಿ ಸೋಮಶೇಖರ್‌ ಗೆ ಪರಿಚಯಿಸಿದ್ದನು.

ಮಾಜಿ ಡಿಐಜಿ ಸೋಮಶೇಖರ್ ಹಾಗೂ ಜೈಲು ಸಿಬ್ಬಂದಿ ಶ್ರೀಕಾಂತ್ ಕೈದಿ ಶಂಕರ್ ಪತ್ನಿಯನ್ನು ಲೈಂಗಿಕವಾಗಿ ಬಳಸಿಕೊಂಡ ಗಂಭೀರ ಆರೋಪವಿದೆ. ಮಾಜಿ ಡಿಐಜಿ ಸೋಮಶೇಖರ್ ಕೈದಿ ಪತ್ನಿಗೆ ಪದೇ ಪದೇ ವೀಡಿಯೋ ಕಾಲ್ ಮಾಡಿ ಬೆತ್ತಲಾಗುವಂತೆ ಒತ್ತಾಯಿಸುತ್ತಿದ್ದ ಎಂಬ ಶಾಕಿಂಗ್ ವಿಚಾರ ತನಿಖೆಯಿಂದ ಬೆಳಕಿಗೆ ಬಂದಿದೆ. ಕೇವಲ ಈ ಮಹಿಳೆ ಮಾತ್ರವಲ್ಲದೆ, ಜೈಲಿಗೆ ಕೈದಿಗಳನ್ನು ಭೇಟಿ ಮಾಡಲು ಬರುತ್ತಿದ್ದ ಇನ್ನುಳಿದ ಕೆಲ ಮಹಿಳೆಯರ ಸಂಪರ್ಕ ಸಾಧಿಸಿ, ಅವರಿಗೂ ಕಿರುಕುಳ ನೀಡಿರುವ ಮತ್ತು ಲೈಂಗಿಕವಾಗಿ ಬಳಸಿಕೊಂಡಿರುವ ಆರೋಪಗಳು ಮಾಜಿ ಡಿಐಜಿ ಸೋಮಶೇಖರ್ ವಿರುದ್ಧ ಕೇಳಿಬಂದಿವೆ. ಸದ್ಯ ಪೊಲೀಸರು ಸೋಮಶೇಖರ್ ಅವರ ಮೊಬೈಲ್ ವಶಪಡಿಸಿಕೊಂಡು ಎಫ್‌ಎಸ್‌ಎಲ್‌ ಪರೀಕ್ಷೆಗೆ ಕಳುಹಿಸಿದ್ದಾರೆ.

ಜೈಲಿನಿಂದ ಹೊರಬಂದ ಬಳಿಕ ಕೈದಿ ಶಂಕರ್ ತನ್ನ ಹೆಂಡತಿಯನ್ನೇ ಬಿಟ್ಟು ಮತ್ತೊಂದು ಮದುವೆಯಾಗಿದ್ದಾನೆ. ತನಗೆ ಸಹಾಯ ಮಾಡಿದ ಹೆಂಡತಿಗೆ ಪತಿಯೇ ಕೈಕೊಟ್ಟಿದ್ದರಿಂದ ಸಿಟ್ಟಿಗೆದ್ದ ಮೊದಲ ಪತ್ನಿ ತನ್ನ ಆಪ್ತರ ಬಳಿ ಎಲ್ಲಾ ರಹಸ್ಯಗಳನ್ನು ಹೊರಹಾಕಿದ್ದಾಳೆ. ಗಂಡನನ್ನು ಜೈಲಿನಿಂದ ಹೊರತರಲು ತಾನು ಯಾರಿಗೆಲ್ಲಾ ಏನೇನು ಮಾಡಬೇಕಾಯಿತು ಎಂಬ ಕರಾಳ ಸತ್ಯವನ್ನು ಆಕೆ ಬಾಯಿಬಿಟ್ಟಿದ್ದರಿಂದ ಇಡೀ ಪ್ರಕರಣದ ಮುಖವಾಡ ಕಳಚಿಕೊಂಡಿದೆ.

ಇತ್ತೀಚಿನ ಸುದ್ದಿ

deneme bonusu veren siteler gamdom giriş deneme bonusu veren siteler