ಚಿಕ್ಕಮಗಳೂರು: ಗೌರಮ್ಮನ ಮೆರವಣಿಗೆಯಲ್ಲಿ ಭೀಕರ ಪಟಾಕಿ ಅವಘಡ; ಮೂವರ ಸ್ಥಿತಿ ಗಂಭೀರ - Mahanayaka

ಚಿಕ್ಕಮಗಳೂರು: ಗೌರಮ್ಮನ ಮೆರವಣಿಗೆಯಲ್ಲಿ ಭೀಕರ ಪಟಾಕಿ ಅವಘಡ; ಮೂವರ ಸ್ಥಿತಿ ಗಂಭೀರ

chikkamagaluru
16/10/2026

ಚಿಕ್ಕಮಗಳೂರು: ಜಿಲ್ಲೆಯ ಲಕ್ಯಾ ಗ್ರಾಮದಲ್ಲಿ ಗಣಪತಿ ವಿಸರ್ಜನೆ ನಂತರದ ಗೌರಮ್ಮನ ಮೆರವಣಿಗೆಯ ಸಂಭ್ರಮದಲ್ಲಿದ್ದ ವೇಳೆ ಸಂಭವಿಸಿದ ಅಚಾತುರ್ಯದಿಂದ ಪಟಾಕಿ ಸಿಡಿದು ಮೂವರು ಗಂಭೀರವಾಗಿ ಗಾಯಗೊಂಡಿರುವ ದಾರುಣ ಘಟನೆ ವರದಿಯಾಗಿದೆ.

ಪ್ರತಿವರ್ಷದಂತೆ ಗಣಪತಿ ವಿಸರ್ಜನೆ ಬಳಿಕ ಲಕ್ಯಾ ಗ್ರಾಮದಲ್ಲಿ ಮುಂಜಾನೆವರೆಗೂ ಅತ್ಯಂತ ವಿಜೃಂಭಣೆಯಿಂದ ಗೌರಮ್ಮನ ಮೆರವಣಿಗೆಯನ್ನು ನಡೆಸಲಾಗುತ್ತಿತ್ತು. ಈ ಮೆರವಣಿಗೆಯನ್ನು ವೀಕ್ಷಿಸಲು ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಸೇರಿದ್ದರು. ಈ ಸಂದರ್ಭದಲ್ಲಿ ಯುವಕರು ರಾಟೆಗೆ ಪಟಾಕಿ ಕಟ್ಟಿ ಅದಕ್ಕೆ ಬೆಂಕಿ ಹಚ್ಚಿದ್ದಾರೆ.

ಬೆಳಕು ಚೆಲ್ಲುವ ಭರದಲ್ಲಿ ಏಕಾಏಕಿ ಪಟಾಕಿಗಳು ನೆರೆದಿದ್ದ ಜನರ ಮೇಲೆ ಸಿಡಿದು ಅನಾಹುತ ಸೃಷ್ಟಿಸಿದೆ.

ಗಾಯಗೊಂಡವರ ವಿವರ:

ಮಂಜುನಾಥ್: ಇವರ ತಲೆ ಹಾಗೂ ಕಣ್ಣಿನ ಭಾಗಕ್ಕೆ ತೀವ್ರ ಸ್ವರೂಪದ ಗಾಯವಾಗಿದ್ದು, ಕಣ್ಣು ಸಂಪೂರ್ಣ ಹಾನಿಗೊಳಗಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಇವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ.

ರತ್ನ ಮತ್ತು ಭಾಗ್ಯ: ಇಬ್ಬರ ಮುಖದ ಭಾಗಕ್ಕೆ ಗಂಭೀರ ಗಾಯಗಳಾಗಿದ್ದು, ಅವರನ್ನು ಚಿಕ್ಕಮಗಳೂರು ಜಿಲ್ಲೆಯ ಮಲ್ಲೇಗೌಡ ಸರ್ಕಾರಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಈ ಸಂಬಂಧ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಇತ್ತೀಚಿನ ಸುದ್ದಿ

deneme bonusu veren siteler gamdom giriş deneme bonusu veren siteler