ದೇವಿರಮ್ಮ ಬೆಟ್ಟ ಹತ್ತುವಾಗ ಕುಸಿದು ಬಿದ್ದು ಕನ್ಯಾಡಿಯ ವ್ಯಕ್ತಿ ಸಾವು; ಮತ್ತೊಬ್ಬ ಭಕ್ತನ ರಕ್ಷಣೆ - Mahanayaka

ದೇವಿರಮ್ಮ ಬೆಟ್ಟ ಹತ್ತುವಾಗ ಕುಸಿದು ಬಿದ್ದು ಕನ್ಯಾಡಿಯ ವ್ಯಕ್ತಿ ಸಾವು; ಮತ್ತೊಬ್ಬ ಭಕ್ತನ ರಕ್ಷಣೆ

devirama
08/11/2026

ಚಿಕ್ಕಮಗಳೂರು: ಚಿಕ್ಕಮಗಳೂರಿನ ಪ್ರಸಿದ್ಧ ಬಿಂಡಿಗ ದೇವಿರಮ್ಮ ಬೆಟ್ಟ ಹತ್ತುವಾಗ ದಕ್ಷಿಣ ಕನ್ನಡ ಜಿಲ್ಲೆಯ ಕನ್ಯಾಡಿ ನಿವಾಸಿ ಲಕ್ಷ್ಮಣ್ (35) ಎಂಬುವರು ಏಕಾಏಕಿ ಕುಸಿದು ಬಿದ್ದು ಮೃತಪಟ್ಟಿದ್ದಾರೆ.

ಬೆಂಗಳೂರಿನ ಬಾಷ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಲಕ್ಷ್ಮಣ್ ಅವರು ಹೂವಿನಹಳ್ಳಿಯಲ್ಲಿರುವ ತಮ್ಮ ಭಾವನ ಮನೆಗೆ ಬಂದಿದ್ದರು. ರಾತ್ರಿ ಪ್ರಯಾಣ ನಡೆಸಿ ಬಂದಿದ್ದ ಅವರು, ಬೆಳಗಿನ ಜಾವ ಹೆಚ್ಚಿನ ಪ್ರಮಾಣದಲ್ಲಿ ಮಂಜು ಮುಸುಕಿದ್ದ ವಾತಾವರಣದ ನಡುವೆ ಮಲ್ಲೇನಹಳ್ಳಿ ಮಾರ್ಗವಾಗಿ ತಮ್ಮ ಭಾವನೊಂದಿಗೆ ಬೆಟ್ಟ ಏರುತ್ತಿದ್ದರು. ಈ ವೇಳೆ ಮಾರ್ಗಮಧ್ಯೆ ಏಕಾಏಕಿ ಕುಸಿದು ಬಿದ್ದ ಲಕ್ಷ್ಮಣ್ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

ಸುದ್ದಿ ತಿಳಿದ ಕೂಡಲೇ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಮೃತದೇಹವನ್ನು ಬೆಟ್ಟದಿಂದ ಕೆಳಕ್ಕೆ ತಂದಿದ್ದು, ಮರಣೋತ್ತರ ಪರೀಕ್ಷೆಗಾಗಿ ಚಿಕ್ಕಮಗಳೂರಿನ ಸರಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ.

ಇನ್ನೊಂದೆಡೆ, ಮಾಣಿಕ್ಯಾಧಾರ ಜಲಪಾತದ ಕಡೆಯ ಮಾರ್ಗದಲ್ಲಿ ಬೆಟ್ಟ ಏರುತ್ತಿದ್ದ ಮಂಡ್ಯ ಮೂಲದ ಸುನೀಲ್ (31) ಎಂಬುವರು ಕಾಲುಜಾರಿ ಬಿದ್ದು ಅಸ್ವಸ್ಥಗೊಂಡಿದ್ದರು. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಸ್ಥಳೀಯ ಭಕ್ತರು ಅವರನ್ನು ರಕ್ಷಣೆ ಮಾಡಿ ಮೇಲೆತ್ತಿದ್ದಾರೆ. ಬಳಿಕ ಅಗ್ನಿಶಾಮಕ ಸಿಬ್ಬಂದಿ ಅವರನ್ನು ಹೊತ್ತು ತಂದು ಚಿಕಿತ್ಸೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ.

ಇತ್ತೀಚಿನ ಸುದ್ದಿ

deneme bonusu veren siteler gamdom giriş deneme bonusu veren siteler