ಡೆಮೋಕ್ರಾಟೆಕ್ ಗಳ ಗೆಲುವಿನಿಂದ 3 ಟ್ರಿಲಿಯನ್ ಡಾಲರ್ ನಷ್ಟವಾಗಿದೆ ಎಂದ ಟ್ರಂಪ್! - Mahanayaka

ಡೆಮೋಕ್ರಾಟೆಕ್ ಗಳ ಗೆಲುವಿನಿಂದ 3 ಟ್ರಿಲಿಯನ್ ಡಾಲರ್ ನಷ್ಟವಾಗಿದೆ ಎಂದ ಟ್ರಂಪ್!

trump
08/11/2026

ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇತ್ತೀಚೆಗೆ ನಡೆದ ಮಧ್ಯಂತರ ಚುನಾವಣೆಯಲ್ಲಿ (Midterm Elections) ಡೆಮೋಕ್ರಟಿಕ್ ಪಕ್ಷ ಸಾಧಿಸಿದ ಬೃಹತ್ ಗೆಲುವನ್ನು ಅಮೆರಿಕದ ಇತಿಹಾಸದಲ್ಲೇ “ದೊಡ್ಡ ಹಿನ್ನಡೆ” ಎಂದು ಬಣ್ಣಿಸಿದ್ದಾರೆ.

ಅಷ್ಟೇ ಅಲ್ಲದೆ, ಈ ಚುನಾವಣಾ ಫಲಿತಾಂಶದಿಂದಾಗಿ ಅಮೆರಿಕದ ಶೇರು ಮಾರುಕಟ್ಟೆಯಲ್ಲಿ ಸುಮಾರು 3 ಟ್ರಿಲಿಯನ್ ಡಾಲರ್ಗಳಷ್ಟು ದೊಡ್ಡ ಮಟ್ಟದ ನಷ್ಟ ಸಂಭವಿಸಿದೆ ಎಂದು ಅವರು ಆರೋಪಿಸಿದ್ದಾರೆ.

ಡೆಮೋಕ್ರಾಟ್ ಗಳು ಕಾಂಗ್ರೆಸ್ ನ ಎರಡೂ ಸದನಗಳಲ್ಲಿ ಜಯಗಳಿಸಿದ ನಂತರ ವಾಲ್ ಸ್ಟ್ರೀಟ್ ಮತ್ತು ತಂತ್ರಜ್ಞಾನ (AI) ವಲಯದ ಷೇರುಗಳಲ್ಲಿ ತೀವ್ರ ಕುಸಿತ ಕಂಡುಬಂದಿದೆ. ನೂತನ ಸರ್ಕಾರದಿಂದ ಕಠಿಣ ನಿಯಮಗಳು ಬರಬಹುದು ಎಂಬ ಹೂಡಿಕೆದಾರರ ಆತಂಕದಿಂದಾಗಿ ಮಾರುಕಟ್ಟೆ ಮೌಲ್ಯದಲ್ಲಿ 3 ಟ್ರಿಲಿಯನ್ ಡಾಲರ್ಗೂ ಹೆಚ್ಚು ನಷ್ಟವಾಗಿದೆ.

ಚುನಾವಣಾ ಫಲಿತಾಂಶದ ಕುರಿತು ಮಾತನಾಡಿದ ಟ್ರಂಪ್, “ನಮ್ಮ ದೇಶವು ಈ ಚುನಾವಣೆಯ ಕಾರಣದಿಂದಾಗಿ 3 ಟ್ರಿಲಿಯನ್ ಡಾಲರ್ ಕಳೆದುಕೊಂಡಿದೆ” ಎಂದಿದ್ದಾರೆ. ಅಲ್ಲದೆ, “ಈ ಚುನಾವಣೆಯಲ್ಲಿ ನನ್ನ ಹೆಸರು ಇರಲಿಲ್ಲ. ಒಂದು ವೇಳೆ ನಾನೇ ಸ್ಪರ್ಧೆಯಲ್ಲಿದ್ದಿದ್ದರೆ ನಾವು ಖಂಡಿತ ಗೆಲ್ಲುತ್ತಿದ್ದೆವು” ಎಂದು ತಮ್ಮ ಪಕ್ಷದ ಸೋಲಿನ ಹೊಣೆಯಿಂದ ದೂರವುಳಿಯುವ ಪ್ರಯತ್ನ ಮಾಡಿದ್ದಾರೆ.

ರಿಪಬ್ಲಿಕನ್ ಪಕ್ಷಕ್ಕೆ ಎದುರಾದ ಈ ಸೋಲಿನ ಹೊರತಾಗಿಯೂ, ತಮ್ಮ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿರುವ ಟ್ರಂಪ್, ಶೀಘ್ರದಲ್ಲೇ ಮತ್ತಷ್ಟು ಬಲವಾಗಿ ಮತ್ತು ದೊಡ್ಡ ಮಟ್ಟದಲ್ಲಿ ಕಮ್ಬ್ಯಾಕ್ ಮಾಡುವುದಾಗಿ ಭರವಸೆ ನೀಡಿದ್ದಾರೆ.

ತಮ್ಮ ರಾಜಕೀಯ ನಿರ್ಧಾರಗಳು ಮತ್ತು ಇರಾನ್ ಮೇಲಿನ ಮಿಲಿಟರಿ ದಾಳಿಯ ಕುರಿತು ಎದ್ದಿರುವ ಟೀಕೆಗಳಿಗೆ ಉತ್ತರಿಸಿದ ಟ್ರಂಪ್, ದೇಶದ ಭದ್ರತೆಯ ದೃಷ್ಟಿಯಿಂದ ಇರಾನ್ ಅಣುವಸ್ತ್ರ ಹೊಂದುವುದನ್ನು ತಡೆಯುವುದು ಅನಿವಾರ್ಯವಾಗಿತ್ತು ಎಂದು ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.

ಇತ್ತೀಚಿನ ಸುದ್ದಿ

deneme bonusu veren siteler gamdom giriş deneme bonusu veren siteler