ರೈಲಿನ ಒಳಗೆ ಅನಧಿಕೃತ ವ್ಯಾಪಾರ, ಧೂಮಪಾನ, ಭಿಕ್ಷೆಗೆ ರೂ.2,000 ದಂಡ
ನವದೆಹಲಿ: ರೈಲುಗಳಲ್ಲಿ ಧೂಮಪಾನ ಮಾಡುವುದು, ಭಿಕ್ಷೆ ಬೇಡುವುದು ಮೊದಲಾದ ಅಪರಾಧಗಳನ್ನು ತಡೆಯಲು ಭಾರತೀಯ ರೈಲ್ವೆ ಕಠಿಣ ಕಾನೂನನ್ನು ಜಾರಿಗೊಳಿಸಿದೆ.
ಇದರನ್ವಯ ರೈಲಿನಲ್ಲಿ ಭಿಕ್ಷೆ ಬೇಡಿದರೆ, ಸಿಗರೇಟ್ ಸೇವಿಸಿದರೆ ಅಥವಾ ಅನಧಿಕೃತವಾಗಿ ವ್ಯಾಪಾರ ಮಾಡಿದರೆ ರೂ.2,000 ದಂಡ ಬೀಳಲಿದೆ.
ರೈಲಿನಲ್ಲಿ ಧೂಮಪಾನಕ್ಕೆ 2,000 ರೂ. ದಂಡ. ಒಂದು ವೇಳೆ ಕಟ್ಟದಿದ್ದರೆ ಕೋರ್ಟ್ಗೆ ಕಳಿಸಲಾಗುವುದು. ಕೋರ್ಟ್ನಲ್ಲಿ ಗರಿಷ್ಠ 5,000 ರೂ. ದಂಡ ವಿಧಿಸಬಹುದು.
ಇನ್ನೂ ಪರವಾನಗಿ ಇಲ್ಲದೆ ಅನಧಿಕೃತವಾಗಿ ವ್ಯಾಪಾರ ಮಾಡಿದರೆ 2,000 ರೂ. ಹಾಗೂ ರೈಲು ಅಥವಾ ನಿಲ್ದಾಣಗಳಲ್ಲಿ ಭಿಕ್ಷಾಟನೆಗೆ 2,000 ರೂ. ದಂಡ ಬೀಳಲಿದೆ.
ಕೋರ್ಟ್ ಗರಿಷ್ಠ 3 ತಿಂಗಳ ಜೈಲು ಶಿಕ್ಷೆ, 5,000 ರೂ. ದಂಡ ಅಥವಾ ಎರಡನ್ನೂ ವಿಧಿಸಬಹುದು. 4 ಅಥವಾ ಅದಕ್ಕಿಂತ ಹೆಚ್ಚು ಬಾರಿ ಪುನರಾವರ್ತನೆ ಮಾಡುವವರಿಗೆ ಗರಿಷ್ಠ 1 ವರ್ಷ ಜೈಲು, 5,000 ರೂ. ದಂಡಕ್ಕೆ ಅವಕಾಶವಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD


























