ಆಟವಾಡುತ್ತಿದ್ದ ಬಾಲಕನನ್ನು ಎಳೆದೊಯ್ದ ಸಮುದ್ರದ ಬೃಹತ್ ಅಲೆಗಳು: ಬಾಲಕನ ಮೃತದೇಹ ಪತ್ತೆ - Mahanayaka

ಆಟವಾಡುತ್ತಿದ್ದ ಬಾಲಕನನ್ನು ಎಳೆದೊಯ್ದ ಸಮುದ್ರದ ಬೃಹತ್ ಅಲೆಗಳು: ಬಾಲಕನ ಮೃತದೇಹ ಪತ್ತೆ

panambur beach
26/02/2024

ಮಂಗಳೂರು:  ಪೆ. 24ರಂದು ಪಣಂಬೂರು ಬೀಚ್ ನಲ್ಲಿ ಆಟವಾಡುತ್ತಿದ್ದ ವೇಳೆ ಬೃಹತ್ ಅಲೆಯೊಂದಿಗೆ ಕೊಚ್ಚಿ ಹೋಗಿದ್ದ ವಿದ್ಯಾರ್ಥಿಯ ಮೃತದೇಹ ಭಾನುವಾರ ಮುಂಜಾನೆ ತಣ್ಣೀರು ಬಾವಿ ಬಳಿ ಪತ್ತೆಯಾಗಿದೆ.

ಉತ್ತರ ಕರ್ನಾಟಕ ಮೂಲದ ತುಕಾರಾಮ(13) ಮೃತ ಬಾಲಕನಾಗಿದ್ದಾನೆ.  ತಣ್ಣೀರು ಬಾವಿ ಬಳಿ ಬಾಲಕನ ಮೃತದೇಹ ತೇಲುತ್ತಿರುವುದನ್ನು ಕಂಡ ಮೀನುಗಾರರು ಪೊಲೀಸರಿಗೆ ಮಾಹಿತಿ ನೀಡಿದ್ದು, ಧನಪಾಲ್ ಸಾಲ್ಯನ್ ಅವರು ಮೃತದೇಹವನ್ನು ತಡಕ್ಕೆ ತಂದಿದ್ದಾರೆ.

ತುಕಾರಾಮ್ ಬೈಕಂಪಾಡಿ ಮೀನಕಳಿ ಸರ್ಕಾರಿ ಪ್ರಾಥಮಿಕ ಶಾಲೆಯ 7ನೇ ತರಗತಿ ವಿದ್ಯಾರ್ಥಿಯಾಗಿದ್ದಾನೆ.  ಶಾಲೆ ಬಿಟ್ಟ ಬಳಿಕ ಸ್ನೇಹಿತನ ಜೊತೆಗೆ ಪಣಂಬೂರು ಬೀಚ್ ಗೆ ಬಂದಿದ್ದು, ನೀರಿನಲ್ಲಿ ಆಟವಾಡಲು ಆರಂಭಿಸಿದ್ದ. ಇದ್ದಕ್ಕಿದ್ದಂತೆಯೇ ಬಾಲಕನನ್ನು ಬೃಹತ್ ಅಲೆ ಎಳೆದೊಯ್ದಿದೆ. ಬೀಚ್ ನ ರಕ್ಷಣಾ ದಳದವರು ಬಾಲಕನನ್ನು ಕಾಪಾಡಲು ಸಾಕಷ್ಟು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ